ಭಾರತದ ವಾತಾವರಣಕ್ಕೆ ಅನುಗುಣವಾಗಿ ಬರಲಿದೆ ಜಪಾನ್‌ನ ಬುಲೆಟ್‌ ರೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ “ಬುಲೆಟ್ ಟ್ರೈನ್” ನ ಕನಸು ಶೀಘ್ರದಲ್ಲೇ ನನಸಾಗುತ್ತಿದೆ. ಜಪಾನ್‌ನಲ್ಲಿ ಪ್ರಸ್ತುತ ಬಳಕೆಯಲ್ಲಿರುವ E5 ಷಿಂಕಾಸೆನ್ ತಂತ್ರಜ್ಞಾನದ ನೆರವಿನೊಂದಿಗೆ ಭಾರತ ಸರ್ಕಾರವು ಬುಲೆಟ್ ರೈಲು ಯೋಜನೆಯನ್ನು ಕೈಗೊಳ್ಳಲಿದೆ. ಜಪಾನ್ ಸಹಯೋಗದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಬುಲೆಟ್ ರೈಲನ್ನು ಭಾರತ ತಲುಪುವ ಮುನ್ನ ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಮಾರ್ಪಾಡು ಮಾಡಲಾಗುವುದು. ತಾಪಮಾನ, ಧೂಳು ಮತ್ತು ರೈಲಿನ ತೂಕದಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬುಲೆಟ್ ರೈಲಿನಲ್ಲಿ ಬದಲಾವಣೆಗಳನ್ನು ಮಾಡಲಾಗುವುದು ಎಂದು ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ನ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅಗ್ನಿಹೋತ್ರಿ ಹೇಳಿದ್ದಾರೆ.

ಸೂರತ್ ಮತ್ತು ಬಿಲ್ಲಿಮೊರಾ ನಡುವಿನ 48 ಕಿಮೀ ಟ್ರ್ಯಾಕ್ 2027 ರ ವೇಳೆಗೆ ಪೂರ್ಣಗೊಳ್ಳಲಿದೆ. ಆದ್ದರಿಂದ ಯೋಜನೆಯ ಮೊದಲ ಪ್ರಯೋಗಗಳು ಒಂದು ವರ್ಷ ಮುಂಚಿತವಾಗಿ ನಡೆಯುತ್ತವೆ. ಜಪಾನ್‌ನಲ್ಲಿ ಷಿಂಕಾಸೆನ್ ಹೈಸ್ಪೀಡ್ ರೈಲಿನಲ್ಲಿ E5 ಸರಣಿಯ ರೈಲುಗಳನ್ನು ಹಿಟಾಚಿ ಮತ್ತು ಕವಾಸಕಿ ಹೆವಿ ಇಂಡಸ್ಟ್ರೀಸ್ ಜಂಟಿಯಾಗಿ ನಿರ್ಮಿಸಿವೆ. ಅವು ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲವು ಎಂದಿದ್ದಾರೆ.

3.35 ಮೀಟರ್ ಅಗಲವನ್ನು ಹೊಂದಿರುವ ಈ ರೈಲುಗಳು ಫ್ರಾನ್ಸ್ ಮತ್ತು ಜರ್ಮನಿಯಂತಹ ದೇಶಗಳಲ್ಲಿ ಲಭ್ಯವಿರುವ ವಿಶಾಲವಾದ ರೈಲುಗಳೊಂದಿಗೆ ಸ್ಪರ್ಧಿಸುತ್ತವೆ. ಜಪಾನ್ ಆರು ರೈಲುಗಳನ್ನು ಭಾರತೀಯ ಪರಿಸ್ಥಿತಿಗಳಿಗೆ ಸರಿಹೊಂದುವಂತೆ ಮಾರ್ಪಡಿಸಲಾಗುವುದು, ಪ್ರಸ್ತುತ ಜಪಾನ್‌ನ ಉತ್ತರ ಭಾಗದಲ್ಲಿ ವ್ಯಾಪಕವಾಗಿ ಬಳಸುತ್ತಿರುವ ಈ ಬುಲೆಟ್ ರೈಲುಗಳು ಸುರಕ್ಷತಾ ಕ್ರಮಗಳನ್ನು ಕೂಡಾ ಹೊಂದಿವೆಯಂತೆ. ಇದು ಭೂಕಂಪನ ವಿರೋಧಿ ತಂತ್ರಜ್ಞಾನವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!