ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಚಂದ್ರಯಾನ-3 ಬಳಿಕ ಜಪಾನ್‌ನ ‘ಸ್ಲಿಮ್ ನೌಕೆ’ ಚಂದ್ರನ ಮೇಲೆ ಯಶಸ್ವಿಯಾಗಿ ಕಾಲಿಟ್ಟಿದೆ.
ಶನಿವಾರ ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ ಅಂದರೆ ಜಾಕ್ಸಾ ಸ್ಲಿಮ್ ನೌಕೆಯನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದೆ. ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (JAXA) ಸ್ಲಿಮ್ ಇಳಿಯಲು ಆರಂಭ ಮಾಡಿದ ನಂತರ 20 ನಿಮಿಷಗಳಲ್ಲಿ ಲ್ಯಾಂಡಿಂಗ್ ಪ್ರಯತ್ನವನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿತ್ತು.
2023ರ ಸೆಪ್ಟೆಂಬರ್ 6 ರಂದು ಉಡಾವಣೆಯಾಗಿದ್ದ ಸ್ಲಿಮ್ ಸಣ್ಣ ಕಾರಿನ ಗಾತ್ರದ ನೌಕೆ 2023ರ ಕ್ರಿಸ್‌ಮನ್ ದಿನದಂದು ಕಕ್ಷೆಯನ್ನು ಪ್ರವೇಶಿಸಿತ್ತು. ಸ್ಲಿಮ್ ಅನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸುವ ಮೂಲಕ ಚಂದ್ರನ ಮೇಲೆ ಕಾಲಿಟ್ಟಿ ವಿಶ್ವದ ಐದನೇ ದೇಶ ಎನ್ನುವ ಸಾಧನೆ ಮಾಡಿದೆ.
月面着陸の瞬間(テレメ上で)のパブリックビューイング、緊張感やばかった#SLIM #SLIM月着陸ライブ pic.twitter.com/t5CJLrTOiX
— ぐりぺん (@guripen) January 19, 2024
ಲ್ಯಾಂಡಿಂಗ್‌ಗಾಗಿ 600×4000 ಕಿಮೀ ಪ್ರದೇಶವನ್ನು ಶೋಧನೆ ಮಾಡಲಾಗಿತ್ತು ಎಂದು ಜಪಾನಿನ ಬಾಹ್ಯಾಕಾಶ ಸಂಸ್ಥೆ JAXA ಹೇಳಿದೆ. ಈ ಸ್ಥಳವು ಚಂದ್ರನ ಧ್ರುವ ಪ್ರದೇಶದಲ್ಲಿದೆ. ಮಹತ್ವದ ವಿಚಾರವೆಂದರೆ, ನೌಕೆಯು ಲ್ಯಾಂಡಿಂಗ್ಗಾಗಿ ಆಯ್ಕೆ ಮಾಡಿದ ಸ್ಥಳದ ಬಳಿ ನಿಖರವಾಗಿ ಲ್ಯಾಂಡಿಂಗ್ ಮಾಡಿದೆ. ಈ ಲ್ಯಾಂಡಿಂಗ್ ಸೈಟ್ ಹೆಸರು ಶಿಯೋಲಿ ಕ್ರೇಟರ್ ಎನ್ನಲಾಗಿದೆ. ಇದು ಚಂದ್ರನ ಮೇಲಿರುವ ಕಪ್ಪು ಚುಕ್ಕೆ ಎಂದು ಹೇಳಲಾಗುತ್ತದೆ. ಮತ್ತೊಂದು ಲ್ಯಾಂಡಿಂಗ್ ಸೈಟ್ ಆಗಿ ಮೇರ್ ನೆಕ್ಟರಿಸ್ ಅನ್ನು ಜಪಾನ್ ಗುರುತಿಸಿತ್ತು. ಇದನ್ನು ಚಂದ್ರನ ಸಮುದ್ರ ಎಂದು ಕರೆಯಲಾಗುತ್ತದೆ. ಸ್ಲಿಮ್ ಸುಧಾರಿತ ಆಪ್ಟಿಕಲ್ ಮತ್ತು ಇಮೇಜ್ ಪ್ರೊಸೆಸಿಂಗ್ ತಂತ್ರಜ್ಞಾನವನ್ನು ಹೊಂದಿದೆ.