Tuesday, February 27, 2024

ಮುಖ್ಯಮಂತ್ರಿಗಳೇ ಹೀಗೆಲ್ಲ ಆಗುತ್ತಿರುತ್ತೆ: ಸಿದ್ದರಾಮಯ್ಯ ಗೆ ಟಾಂಗ್‌ ಕೊಟ್ಟ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಬಿ.ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ & ಟೆಕ್ನಾಲಜಿ ಸೆಂಟ‌ರ್ ನ ಉದ್ಘಾಟನೆ ಹಾಗೂ ಬೋಯಿಂಗ್ ಸುಕನ್ಯಾ ಲೋಕಾರ್ಪಣೆ ಮಾಡಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್‌ ಕೊಟ್ಟಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ತಮ್ಮ ಬಾಷಣದಲ್ಲಿ ಮೋದಿಯವರು ಸಿದ್ದರಾಮಯ್ಯನವರ (Siddaramaiah) ಕಾಲೆಳೆದಿದ್ದಾರೆ. ಇದರ ವೀಡಿಯೋ ತುಣುಕು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗುತ್ತಿದೆ.

ಮೋದಿಯವರು ಮಾತನಾಡುತ್ತಾ ವೈಮಾನಿಕ ರಂಗ ವೇಗವಾಗಿ ಬೆಳೆಯುತ್ತಿದೆ. ಈ ಮೂಲಕ ಭಾರತದ ಆರ್ಥಿಕತೆಯ ದಿಕ್ಕು ಬದಲಾಗುತ್ತಿದೆ. ಉದ್ಯೋಗವಕಾಶಗಳೂ ಹೆಚ್ಚಾಗಿವೆ. ಬೋಯಿಂಗ್ ಹಾಗೂ ಬೇರೆ ಅಂತಾರಾಷ್ಟ್ರೀಯ ವೈಮಾನಿಕ ಕಂಪನಿಗಳಿಗೂ ಭಾರತಕ್ಕೆ ಬರಲು ಇದೇ ಸರಿಯಾದ ಸಮಯ. ಕೇಂದ್ರದಲ್ಲಿ ಈಗ ಸ್ಥಿರ ಸರ್ಕಾರ ಇದೆ ಅಂತಾ ಹೇಳಿದರು.

ಮೋದಿಯವರು ಭಾರತದಲ್ಲಿ ಸ್ಥಿರ ಸರ್ಕಾರ ಇದೆ ಎಂದು ಹೇಳುತ್ತಿದ್ದಂತೆಯೇ ನೆರೆದಿದ್ದ ಬೋಯಿಂಗ್ ಸಂಸ್ಥೆಯ ಸಿಬ್ಬಂದಿ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಇದೇ ಸಂದರ್ಭ ಸಿಎಂ ಕಡೆ ತಿರುಗಿ, ಮುಖ್ಯಮಂತ್ರಿಗಳೇ ಹೀಗೆಲ್ಲ ಆಗುತ್ತಿರುತ್ತದೆ ಅಂತ ಹೇಳುವ ಮೂಲಕ ಮೋದಿ ಕಾಲೆಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!