ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂ ಎನ್ನುವ ಪದ ಅಶ್ಲೀಲ, ಹಿಂದೂ ಪದಕ್ಕೆ ಶಬ್ದಕೋಶದಲ್ಲಿ ಅಶ್ಲೀಲ ಎಂಬರ್ಥ ಇದೆ ಎಂಬ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಒಳಗಾಗಿದ್ದ ಶಾಸಕ ಸತೀಶ್ ಜಾರಜಿಹೊಳಿ ನಾನು ಕ್ಷಮೆ ಕೇಳೋದಿಲ್ಲ ಎಂದಿದ್ದಾರೆ.
ರಾಜ್ಯದೆಲ್ಲೆಡೆ ವಿವಾದದ ಅಲೆ ಎಬ್ಬಿಸಿರುವ ಹೇಳಿಕೆಗೆ ಬದ್ಧ ಎಂದಿರುವ ಜಾರಕಿಹೊಳಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಕೂಡಲೆ ಜನರ ಬಳಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದು, ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರು ಹಾಗೂ ಶಾಸಕರಿಗೆ ಕರೆ ನೀಡಿದ್ದು, ಕ್ಷಮೆ ಕೇಳುವವರೆಗೂ ಹೋರಾಟ ನಿಲ್ಲದು ಎಂದಿದ್ದಾರೆ. ಈಗಾಗಲೇ ಹಲವು ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸಿದ್ದಾರೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಹಿಂದೂ ಪದ ಪರ್ಶಿಯನ್ ಭಾಷೆಯಿಂದ ಪಡೆದದ್ದು, ಶಬ್ದಕೋಶದಲ್ಲಿ ಇದರ ಅರ್ಥ ಅಶ್ಲೀಲ ಎಂದಿದೆ. ಚರ್ಚೆ ಆಗುವುದಕ್ಕೆ ಬಯಸುತ್ತೇನೆ. ಇದಕ್ಕೆ ಬೇರೆ ಆಯಾಮ ನೀಡುವುದು ಅನಗತ್ಯ.ನನ್ನ ಮಾತಿಗೆ ಬದ್ಧ, ನಾನು ತಪ್ಪು ಎಂದು ಯಾರಾದರೂ ಸಾಬೀತುಪಡಿಸಿದರೆ ರಾಜೀನಾಮೆಗೂ ಸಿದ್ಧ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.