Monday, July 4, 2022

Latest Posts

ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ಮಂಕಾದ ಶ್ರೀಲಂಕಾ: 109ರನ್​ಗಳಿಗೆ ಆಲೌಟ್, ಭಾರತ 143 ರನ್​ಗಳ​ ಮುನ್ನಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ಮಂಕಾದ ಪ್ರವಾಸಿ ಶ್ರೀಲಂಕಾ ಅಹರ್ನಿಶಿ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 109ರನ್​ಗಳಿಗೆ ಆಲೌಟ್ ಆಗಿದ್ದು, ಭಾರತ 143 ರನ್​ಗಳ ಇನ್ನಿಂಗ್ಸ್​ ಮುನ್ನಡೆ ಪಡೆದುಕೊಂಡಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನ ಭಾರತ ತಂಡ 252 ರನ್​ಗಳಿಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 6 ವಿಕೆಟ್ ಕಳೆದುಕೊಂಡು 86 ರನ್​ಗಳಿಸಿತ್ತು. ಇಂದು ಆ ಮೊತ್ತಕ್ಕೆ ಕೇವಲ 23 ರನ್​ ಸೇರಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಜಸ್ಪ್ರೀತ್ ಬುಮ್ರಾ 24ಕ್ಕೆ 5, ರವಿಚಂದ್ರನ್ ಅಶ್ವಿನ್​ 30ಕ್ಕೆ2 ಮತ್ತು ಮೊಹಮ್ಮದ್ ಶಮಿ 18ಕ್ಕೆ 2 ಹಾಗೂ ಅಕ್ಷರ್ ಪಟೇಲ್ 21ಕ್ಕೆ 1ವಿಕೆಟ್​ ಪಡೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss