ಗಂಡುಮಗುವಿನ ತಂದೆಯಾದ್ರು ಜಸ್ಪ್ರೀತ್ ಬುಮ್ರಾ, ಮಗು ಹೆಸರೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ಕ್ರಿಕೆಟರ್ ಜಸ್‌ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ದಂಪತಿಗೆ ಗಂಡು ಮಗು ಜನಿಸಿದೆ. ಮಗು ಜನಿಸಿದ ಖುಷಿಯನ್ನು ಬುಮ್ರಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನಿನ್ನೆಯಷ್ಟೇ ಟೀಂ ಇಂಡಿಯಾ ತೊರೆದು ಮುಂಬೈಗೆ ಬುಮ್ರಾ ತೆರಳಿದ್ದು ಯಾವ ಕಾರಣಕ್ಕೆ ಎನ್ನುವ ವಿಷಯ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಅದಕ್ಕೆ ಇಂದು ಬುಮ್ರಾ ಉತ್ತರ ನೀಡಿದ್ದು, ಮಗ ಬಂದಿದ್ದಾನೆ, ಅಪ್ಪನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಪತ್ನಿ ಸಂಜನಾ ಡೆಲಿವರಿಗೆ ಸ್ವಲ್ಪವೇ ಸಮಯ ಬಾಕಿ ಇದೆ ಎಂದು ತಿಳಿಯುತ್ತಿದ್ದಂತೆಯೇ ಬುಮ್ರಾ ಮ್ಯಾಚ್ ಬಿಟ್ಟು ತೆರಳಿದ್ದಾರೆ. ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿ, ನಮ್ಮ ಮನೆಗೆ ಪುಟಾಣಿ ಅತಿಥಿ ಎಂಟ್ರಿ ಆಗಿದೆ, ನಾವೇ ಚಂದ್ರನ ಮೇಲಿದ್ದೇವೆ ಎನಿಸುತ್ತಿದೆ. ಮಗನಿಗೆ ಅಂಗದ್ ಜಸ್ಪ್ರೀತ್ ಬುಮ್ರಾ ಎಂದು ಹೆಸರಿಟ್ಟಿದ್ದೇವೆ ಎಂದಿದ್ದಾರೆ.

ಮಗು ಹಾಗೂ ಸಂಜನಾ ಆರೋಗ್ಯ ಸ್ಥಿರವಾಗಿದೆ. ಬುಮ್ರಾ ಅಭಿಮಾನಿಗಳು ಕೂಡ ಕಂಗ್ರಾಟ್ಸ್ ಹೇಳಿ ಖುಷಿಪಟ್ಟಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!