Tuesday, August 16, 2022

Latest Posts

ಇಂಗ್ಲೆಂಡ್​ ವಿರುದ್ಧ 5ನೇ ಟೆಸ್ಟ್​​ ಪಂದ್ಯಕ್ಕೆ ಟೀಮ್ ಇಂಡಿಯಾದ ಸಾರಥಿಯಾಗಿ ಜಸ್ಪ್ರೀತ್​ ಬುಮ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಗ್ಲೆಂಡ್​ ವಿರುದ್ಧ ನಾಳೆಯಿಂದ ಆರಂಭಗೊಳ್ಳಲಿರುವ 5ನೇ ಟೆಸ್ಟ್​​ ಪಂದ್ಯಕ್ಕಾಗಿ ವೇಗದ ಬೌಲರ್​ ಜಸ್ಪ್ರೀತ್​ ಬುಮ್ರಾ ನಾಯಕರಾಗಿದ್ದಾರೆ. ಈ ಕುರಿತು ಭಾರತೀಯ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಉಪನಾಯಕನಾಗಿ ವಿಕೆಟ್ ಕೀಪರ್ ಬ್ಯಾಟರ್​ ರಿಷಭ್​ ಪಂತ್​ ಕಾರ್ಯನಿರ್ವಹಿಸುವರು.
ಟೆಸ್ಟ್‌ ತಂಡದ ಖಾಯಂ ನಾಯಕ ರೋಹಿತ್ ಶರ್ಮಾ ಅವರಿಗೆ ಕೋವಿಡ್​ ದೃಢಪಟ್ಟಿರುವ ಕಾರಣ ​ ಬುಮ್ರಾಗೆ ತಂಡ ಮುನ್ನಡೆಸುವ ಅಪೂರ್ವ ಅವಕಾಶ ಸಿಕ್ಕಿದೆ. ಈ ಮೂಲಕ ಕಪಿಲ್​ ದೇವ್​ ಬಳಿಕ ಅಂದರೆ 35 ವರ್ಷಗಳ ಬಳಿಕ ಭಾರತದ ಟೆಸ್ಟ್ ತಂಡಕ್ಕೆ ವೇಗಿಯೋರ್ವರು ನಾಯಕರಾಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯವರೆಗೆ ಬುಮ್ರಾ 29 ಟೆಸ್ಟ್​ ಪಂದ್ಯಗಳನ್ನಾಡಿದ್ದು, ನಾಯಕತ್ವ ಜವಾಬ್ದಾರಿಯ ಅನುಭವ ಹೊಂದಿಲ್ಲ.
ಇಂಗ್ಲೆಂಡ್​ ವಿರುದ್ಧದ ಐದು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಕೊನೆಯ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿದಾಗ ಮಾತ್ರ ಸರಣಿ ಭಾರತದ ಪಾಲಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss