Friday, June 2, 2023

Latest Posts

ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಜವರಾಯ, ಮೂರು ತಿಂಗಳಲ್ಲಿ 205 ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರು ನಗರ ಸಂಚಾರಿ ಪೊಲೀಸರು ಅಂಕಿ ಅಂಶಗಳನ್ನು ನೀಡಿದ್ದು, ಕಳೆದ ಮೂರು ತಿಂಗಳಲ್ಲಿ 205 ಮಂದಿ ಬೆಂಗಳೂರಿನ ರಸ್ತೆಯ ಮೇಲೆ ಪ್ರಾಣಬಿಟ್ಟಿದ್ದಾರೆ.

2023 ಜನವರಿಯಿಂದ ಮಾರ್ಚ್‌ವರೆಗೆ 205 ಮಂದಿ ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದಾರೆ. ಒಟ್ಟಾರೆ 1,197 ರಸ್ತೆ ಅಪಘಾತಗಳು ಸಂಭವಿಸಿದೆ. ಇನ್ನು 1,051 ಮಂದಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂರು ತಿಂಗಳಿನಲ್ಲಿ ಒಟ್ಟಾರೆ 300 ಮಾರಣಾಂತಿಕ ಹಾಗೂ 997ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿದೆ.

ಕೆಟ್ಟ ರಸ್ತೆಗಳು, ವೇಗದ ಡ್ರೈವಿಂಗ್, ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುವುದು, ನಿರ್ಲಕ್ಷ್ಯದ ವಾಹನ ಚಲಾವಣೆ ಅಪಘಾತಗಳಿಗೆ ಕಾರಣವಾಗಿದೆ. ವಾಹನ ಚಲಾವಣೆ ವೇಳೆ ಸುರಕ್ಷಿತವಾಗಿರಿ, ಆದಷ್ಟು ಕಡಿಮೆ ಸ್ಪೀಡ್‌ನಲ್ಲಿ ಗಾಡಿ ಓಡಿಸಿ, ನೀವು ಕೆಲಸಕ್ಕೆ ತಡವಾಗಿ ಹೋದರೆ ಜೀವ ಹೋಗುವುದಿಲ್ಲ, ನೆನಪಿರಲಿ. ಹೆಲ್ಮೆಟ್ ಇಲ್ಲದೆ ಗಾಡಿ ಹತ್ತಬೇಡಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!