SHOCKING | ತಂದೆಯ ಕಾರ್‌ನಲ್ಲೇ ಇದ್ದ ಜವರಾಯ, ಅಪ್ಪನ ಕಾರ್‌ ಹರಿದು ಮಗಳು ಸಾವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಆಕಸ್ಮಿಕವಾಗಿ ತಂದೆಯಿಂದಲೇ ಕಾರು ಹರಿದು ಮಗು ಸಾವನ್ನಪ್ಪಿರೋ ಘಟನೆ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಒಂದೂವರೆ ವರ್ಷದ ಶೈಜಾ ಜನ್ನತ್ ಮೃತ ಕಂದಮ್ಮ. ರಾತ್ರಿ ವೇಳೆ  ಸಂಬಂಧಿಗಳ ಮದುವೆಗೆ ಎಂದು ಚನ್ನಪಟ್ಟಣಕ್ಕೆ ಹೋಗಿದ್ದ ಕುಟುಂಬ ವಾಪಸ್ ಆಗಿತ್ತು. ಕಾರಿನಿಂದ ಇಳಿದು ಎಲ್ಲರೂ ಮನೆ ಒಳಗೆ ಹೋಗಿದ್ದರು. ಮಗುವಿನ ತಂದೆ ಕಾರಿನಿಂದ ಲಗೇಜ್ ತೆಗೆದು ಮನೆಯೊಳಗೆ ಇಡುತ್ತಿದ್ದರು. ಈ ವೇಳೆ ಮಗು ತಂದೆಯ ಹತ್ತಿರ ಓಡಿ ಬಂದಿದೆ. ಆದರೆ ತಂದೆಗೆ ಮಗಳು ಬಂದಿದ್ದು ಗೊತ್ತಿರಲಿಲ್ಲ.

ಲಗೇಜ್ ತೆಗೆದು ಕಾರು ಪಾರ್ಕಿಂಗ್‌ ಮಾಡಲು ಗಾಡಿ ಓಡಿಸಿದಾಗ ಮಗು ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದೆ.ತನ್ನದೇ ಕಾರಿಗೆ ಸಿಕ್ಕು ಮಗಳು ಮೃತಪಟ್ಟ ನೋವಿನಲ್ಲಿ ತಂದೆ ಹಾಗೂ ಇಡೀ ಕುಟುಂಬ ಕಣ್ಣೀರಿಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!