ಮಡಿಕೇರಿಯಲ್ಲಿ ಘರ್ಜಿಸಿದ ಜೆಸಿಬಿ: ಚಿತ್ರಕಲಾವಿದನ ಮನೆ ನೆಲಸಮ

ಹೊಸದಿಗಂತ ವರದಿ, ಮಡಿಕೇರಿ:

ಮಡಿಕೇರಿ ನಗರದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಜೆಸಿಬಿ ಗರ್ಜಿಸಿದ್ದು, ನಗರದ ಚೈನ್ ಗೇಟ್ ಬಳಿ ಚಿತ್ರ ಕಲಾವಿದ ಆರ್.ಸಂದೀಪ್ ಅನಧಿಕೃತವಾಗಿ ನಿರ್ಮಿಸಿದ್ದ ಮನೆಯನ್ನು ನಗರಸಭೆ ನೆಲಸಮಗೊಳಿಸಿದೆ.
ಸಣ್ಣದೊಂದು ಮನೆಯನ್ನು ನಿರ್ಮಿಸಿಕೊಂಡಿದ್ದ ಸಂದೀಪ್ ಇದನ್ನು ಆರ್ಟ್ ಗ್ಯಾಲರಿ ಎಂದು ಕರೆದುಕೊಂಡಿದ್ದರು. ಅನಧಿಕೃತ ನಿರ್ಮಾಣದ ಬಗ್ಗೆ ನಗರಸಭೆ ಆಕ್ಷೇಪ ವ್ಯಕ್ತಪಡಿಸಿತ್ತಲ್ಲದೆ ಈ ಹಿಂದೆ ತೆರವುಗೊಳಿಸಲು ಪ್ರಯತ್ನ ನಡೆಸಿತ್ತು.
ಆದರೆ ಸಂದೀಪ್ ಪೋಷಕರು ಆತ್ಮಹತ್ಯೆಯ ಬೆದರಿಕೆಯೊಡ್ಡಿ ಕಾರ್ಯಾಚರಣೆ ಸ್ಥಗಿತಗೊಳ್ಳುವಂತೆ ನೋಡಿಕೊಂಡಿದ್ದರು. ಮತ್ತೆ ಹೈಡ್ರಾಮ ಎದುರಾಗಬಹುದೆನ್ನುವ ಕಾರಣದಿಂದ ನಗರಸಭೆ ಅಧಿಕಾರಿಗಳು ಪೊಲೀಸರ ರಕ್ಷಣೆಯೊಂದಿಗೆ ಶುಕ್ರವಾರ ಮುಂಜಾನೆ ಸುಮಾರು 6.30 ಗಂಟೆಗೆ ಜೆಸಿಬಿ ಬಳಸಿ ಮನೆಯನ್ನು ನೆಲಸಮಗೊಳಿಸಿದರು.
ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಂದೀಪ್ ಹಾಗೂ ಪೋಷಕರು ಕಲಾವಿದನಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!