ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಮತ್ತೆ ಜೆಸಿಬಿ ಅಬ್ಬರಿಸಿದ್ದು, ನಾಗರಬಾವಿ ಸಮೀಪದ ಚಂದ್ರ ಲೇಔಟ್ನಲ್ಲಿ ಬೆಳ್ಳಂಬೆಳಿಗ್ಗೆ ಬಿಡಿಎ ಜೆಸಿಬಿಗಳು ಘರ್ಜಿಸಿದ ಪರಿಣಾಮ ನಿನ್ನೆ ಇದ್ದ ಅಂಗಡಿಗಳೆಲ್ಲ ಇಂದು ನೆಲಸಮವಾಗಿ ಬಿಟ್ಟಿವೆ.
ಬಿಡಿಎ ಜಾಗದಲ್ಲಿದ್ದ 40ಕ್ಕೂ ಹೆಚ್ಚು ಅಂಗಡಿ-ಮುಂಗಟ್ಟುಗಳನ್ನ ಬಿಡಿಎ ಕ್ಷಣ ಮಾತ್ರದಲ್ಲಿ ನೆಲಸಮ ಮಾಡಿದೆ.
9 ಎಕರೆ 13 ಗುಂಟೆಯ ಬಿಡಿಎ ಜಾಗ. ತನ್ನದೇ ಜಾಗವನ್ನ ಖಾಸಗಿ ವ್ಯಕ್ತಿ ಕಬ್ಜ ಮಾಡಿದ್ದು ಕೋರ್ಟ್ ಅಂಗಳದಲ್ಲಿ ಹಲವು ವರ್ಷಗಳಿಂದ ಜಾಗ ವಿವಾದದಲ್ಲಿತ್ತು. ವಿವಾದದ ಭೂಮಿ ಬಿಡಿಎಗೆ ಸೇರಿದೆ ಅಂತಾ ಆದೇಶ ಬಂದಿದ್ದೆ ತಡ ಪೊಲೀಸರ ಜೊತೆ ಎಂಟ್ರಿಕೊಟ್ಟ ಬಿಡಿಎ ಅಧಿಕಾರಿಗಳು ಸರ್ವೇ ನಂಬರ್ 78ರಲ್ಲಿದ್ದ 9 ಎಕರೆ ಜಾಗದ 500 ಕೋಟಿ ರೂ. ಮೌಲ್ಯದ ಜಾಗವನ್ನ ತೆಕ್ಕೆಗೆ ಪಡೆದುಕೊಂಡಿದೆ.
ಬಿಡಿಎ ಎಇ ರವಿಕುಮಾರ್, ಬಿಡಿಎ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಿಡಿಎ ಜಾಗವನ್ನ ಬಿಡಿಎ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಸದ್ಯ ಬಿಡಿಎ ಕಾರ್ಯಾಚರಣೆಯಿಂದ 40ಕ್ಕೂ ಹೆಚ್ಚಿನ ಅಂಗಡಿ-ಮುಂಗಟ್ಟುಗಳು ನೆಲಕ್ಕುರುಳಿವೆ.