ಸಿದ್ದರಾಮಯ್ಯ ರಾಜೀನಾಮೆ ನೀಡಿ, ತನಿಖೆ ಎದುರಿಸಲಿ: ಯತ್ನಾಳ್

ಹೊಸದಿಗಂತ ವರದಿ, ವಿಜಯಪುರ:

ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು. ಅವರಿವರ ಮಾತು ಕೇಳಿ ರಾಜೀನಾಮೆ ಕೊಡದೇ ಇರೋದು ಸರಿಯಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದರು.

ಹಿಂದೆ ಕೂಡ ಸಿದ್ದರಾಮಯ್ಯ ಅವರ ಅಹಿಂದ ಸಂಘಟನೆಯಲ್ಲಿ ನಾನು ಭಾಗಿ ಆಗಿದ್ದೆ, ಅದು ಪಕ್ಷಾತೀತ ಹೋರಾಟವಾಗಿತ್ತು. ಈಗಲೂ ಮತ್ತೆ ಸಿದ್ದರಾಮಯ್ಯ ಅಹಿಂದ ಹೋರಾಟ ಮಾಡಿದ್ದರೆ ನಾನು ಬೆಂಬಲ ಕೊಡ್ತೆನೆ, ಅದು ಪಕ್ಷಾತೀತ ಹೋರಾಟ ಆಗಿರುತ್ತೆ ಎಂದರು.

ಎರಡನೇ ಪಾದಯಾತ್ರೆ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆ ಮಾಡಲು ಹೈಕಮಾಂಡ್ ಮನವಿ ಮಾಡಿದ್ದೇವೆ, ಇದುವರೆಗೂ ಹೈಕಮಾಂಡ್ ನಿಂದ ಗ್ರಿನ್ ಸಿಗ್ನಲ್ ಸಿಕ್ಕಿಲ್ಲ. ಬಸವಕಲ್ಯಾಣದಿಂದ ಹಿಡಿದು ಉತ್ತರ ಕರ್ನಾಟಕದ ಎಲ್ಲ ಕಡೆ ಪಾದಯಾತ್ರೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಪಾದಯಾತ್ರೆಯನ್ನ ಬೆಂಗಳೂರಲ್ಲಿ ಅಂತ್ಯ ಮಾಡಿ ಸಮಾವೇಶ ಮಾಡುವ ವಿಚಾರವಿದ್ದು, ಇದಕ್ಕೆಲ್ಲ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕ ನಂತರ ಮಾಡುತ್ತೇವೆ ಎಂದರು.

ಈಶ್ವರಪ್ಪರನ್ನ ಬಿಜೆಪಿಗೆ ತರಲು ಯತ್ನಾಳ್ ಪ್ರಯತ್ನ, ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಸುಳ್ಳು. ಈಶ್ವರಪ್ಪ ಬಿಜೆಪಿಗೆ ಕರೆ ತರಲು ಸಭೆ ನಡೆಸಿಲ್ಲ. ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಸಂಘಟನೆಗಾಗಿ ಸಭೆ ನಡೆಸಿದ್ದೇವೆ, ರಾಜ್ಯದಲ್ಲಿ ಸಾಬರ ಸಲುವಾಗಿ ಸರ್ಕಾರ ಇದೆ ಎನ್ನುವಂತಾಗಿದೆ. ಈ ವಿಚಾರಕ್ಕಾಗಿ ಹಿಂದೂಳಿದ ನಾಯಕರಾದ ಈಶ್ವರಪ್ಪರ ಭೇಟಿ ಮಾಡಿದ್ದೇನೆ, ಈಶ್ವರಪ್ಪ ಪಕ್ಷದಲ್ಲಿ ನಿಷ್ಠಾವಂತರಾಗಿದ್ದರು. ಪ್ರಧಾನಿ ಕರೆ ಮಾಡಿ ಹೇಳಿದ್ದಕ್ಕೆ ಕ್ಷೇತ್ರ ಬಿಟ್ಟುಕೊಟ್ಟರು, ಈಶ್ವರಪ್ಪಗೆ ತಮ್ಮದೆಯಾದ ಮೌಲ್ಯ ಇವೆ, ಮುಂದಿನ ದಿನಗಳಲ್ಲಿ ಅವರು ಪಕ್ಷಕ್ಕೆ ಬರಲಿ ಎಂದು ಬಯಸುತ್ತೇವೆ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.

ಈಶ್ವರಪ್ಪ- ಯತ್ನಾಳ್ ಆರ್‌ಸಿಬಿ ಸಂಘಟನೆ ವಿಚಾರ ಬಗ್ಗೆ, ನೋ ಆರ್‌ಸಿಬಿ. ರಾಯಣ್ಣ, ಚನ್ನಮ್ಮ ಬ್ರಿಗೇಡ್ ಎಲ್ಲಾ ಸುಳ್ಳು. ಈಶ್ವರಪ್ಪ ಸಂಘಟನೆಗೆ ಬೆಂಬಲ ಅಂತ ಅಲ್ಲಾ. ಸಮಾಜದ ಜನರಿಗೆ ಅನ್ಯಾಯವಾಗಿದೆ, ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!