Monday, November 28, 2022

Latest Posts

ಕಲಬುರಗಿಯಲ್ಲಿ ಡಿ.2, 8 ರಂದು ಜೆಡಿಎಸ್ ಸಮಾವೇಶ: ಬಂಡೆಪ್ಪ ಖಾಶಂಪುರ

ಹೊಸದಿಗಂತ ವರದಿ, ಕಲಬುರಗಿ
ಮುಂಬರುವ ವಿಧಾನ ಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಸಲುವಾಗಿ ಜಿಲ್ಲೆಯಲ್ಲಿ ಜೆಡಿಎಸ್  ಪಕ್ಷದಿಂದ ಡಿಸೆಂಬರ್ 02, ಹಾಗೂ ಡಿ. 08ರಂದು ಮಹಿಳಾ ಸಮಾವೇಶ ಹಾಗೂ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಶಾಸಕ ಬಂಡೇಪ್ಪಾ ಖಾಶಂಪುರ ತಿಳಿಸಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಡಿಸೆಂಬರ್ 2 ರಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರು ಜಿಲ್ಲೆಯ ಆಳಂದ ಮತಕ್ಷೇತ್ರದಲ್ಲಿ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅದೇ ರೀತಿ ಡಿಸೆಂಬರ್ 08 ರಂದು ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಜೆಡಿಎಸ್ ಕಾಯ೯ಕತ೯ರ ಬೃಹತ್ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಚುನಾವಣಾ ವಾತಾವರಣ ಪ್ರಾರಂಭವಾಗಿದೆ.ಎರಡು ರಾಷ್ಟ್ರೀಯ ಪಕ್ಷಗಳು ಭಾರತ ಜೋಡೋ ಯಾತ್ರೆ, ಜನಸಂಕಲ್ಪ ಯಾತ್ರೆ ಮಾಡುತ್ತಿದ್ದು,ಹೀಗಾಗಿ ನಮ್ಮ ಪಕ್ಷದ ಹಿತದೃಷ್ಟಿಯಿಂದ ಪಂಚರತ್ನ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು. ಇದೇ 18ರಂದು ಮುಳುಬಾಗಿಲಿನಿಂದ ಪಂಚರತ್ನ ರಥಯಾತ್ರೆ ಹೊರಡಲಿದ್ದು,ಜನೇವರಿ 7 ರಂದು ಕಲಬುರಗಿ ಜಿಲ್ಲೆಗೆ ಆಗಮಿಸಲಿದೆ ಎಂದರು. ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ, ರೈತರ ಸ್ವಾವಲಂಬಿ ಬದುಕು, ಯುವ ಸಬಲೀಕರಣ ಹಾಗೂ ಮಹಿಳಾ ಸಬಲೀಕರಣ ಸೇರಿದಂತೆ ಜನರ ಕಷ್ಟವನ್ನು ದೂರ ಮಾಡುವುದೆ ಪಂಚರತ್ನ ರಥಯಾತ್ರೆ ಮುಖ್ಯ ಉದ್ದೇಶವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸುರೇಶ್ ಮಹಾಗಾಂವ್, ಕೃಷ್ಣ ರೆಡ್ಡಿ, ಶಿವಕುಮಾರ್ ನಾಟೀಕರ್,ಅಲೀ ಇನಾಂದಾರ್,ಬಾಲರಾಜ್ ಗುತ್ತೇದಾರ, ಮಹಾಂತೇಶ ಪಾಟೀಲ್, ಸಿದ್ದಣ್ಣಾ ಪಾಟೀಲ್ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!