Saturday, December 9, 2023

Latest Posts

ಕೇನ್‌- ಲಾಥಮ್‌ ದ್ವಿಶತಕದಾಟದ ಅಬ್ಬರ: ಮೊದಲ ಏಕದಿನದಲ್ಲಿ ಭಾರತಕ್ಕೆ 7 ವಿಕೆಟ್‌ಗಳ ಸೋಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
‌ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್ ಟಾಮ್‌ ಲಾಥಮ್ ಮನಮೋಹಕ ಶತಕ ಹಾಗೂ ನಾಯಕ ಕೇನ್‌ ವಿಲಿಯಮ್ಸನ್‌ ಆಕರ್ಷಕ ಆಟದ ಬಲದಿಂದ ಆತಿಥೇಯ ನ್ಯೂಜಿಲೆಂಡ್‌ ತಂಡ ಆಕ್ಲೆಂಡ್‌ನ ಈಡನ್ ಪಾರ್ಕ್‌ನ ನಡೆದ ಭಾರತ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್‌ ಸೋತು ಕ್ರೀಸ್‌ಗಿಳಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿತ್ತು. ತಂಡದ ಪರ ಶ್ರೇಯಸ್ ಅಯ್ಯರ್ ಗರಿಷ್ಠ 80 ರನ್ ಗಳಿಸಿದರೆ, ನಾಯಕ ಶಿಖರ್ ಧವನ್ 72 ರನ್​ಗಳ ಇನಿಂಗ್ಸ್ ಆಡಿದರು. ಅವರ ಆರಂಭಿಕ ಜೊತೆಗಾರ ಶುಭಮನ್ ಗಿಲ್ ಕೂಡ 50 ರನ್​ಗಳ ಕಾಣಿಕೆ ನೀಡಿದರು. ನ್ಯೂಜಿಲೆಂಡ್ ಪರ ಲೂಕಿ ಫರ್ಗುಸನ್ ಮತ್ತು ಟಿಮ್ ಸೌಥಿ ತಲಾ ಮೂರು ವಿಕೆಟ್ ಪಡೆದರು. 307 ರನ್‌ ಗುರಿ ಬೆನ್ನತ್ತಿದ ಆತಿಥೇಯ ನ್ಯೂಜಿಲೆಂಡ್ ತಂಡ  47.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 309 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.
ಕಿವೀಸ್‌ ಪರ ಟಾಮ್‌ ಲಾಥಮ್ 104 ಎಸೆತಗಳಲ್ಲಿ 145 ರನ್‌ ಸಿಡಿಸಿದರು. ತಕ್ಕ ಸಾಥ್‌ ನೀಡಿದ ನಾಯಕ ಕೇನ್‌ ವಿಲಿಯಂ ಸನ್ 98 ಎಸೆತಗಳಲ್ಲಿ 94 ರನ್‌ (7 ಬೌಂಡರಿ, 1 ಸಿಕ್ಸರ್)‌ ಸಿಡಿಸಿ ತಂಡವನ್ನು ಜಯದ ಗಡಿ ಮುಟ್ಟಿಸಿದರು. ಟೀಂ ಇಂಡಿಯಾ ಪರ ಪಾದಾರ್ಪನೆ ಮಾಡಿದ ವೇಗಿ ಉಮ್ರಾನ್‌ ಮಲಿಕ್‌ 2 ವಿಕೆಟ್‌ ಪಡೆದರೆ, ಶಾರ್ದೂಲ್‌ ಠಾಕೂರ್‌ 1 ವಿಕೆಟ್‌ ಪಡೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!