Sunday, December 4, 2022

Latest Posts

ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾದ ಜೆಡಿಎಸ್ ಮುಖಂಡ‌ ಬಳಿಗಾರ್

ಹೊಸದಿಗಂತ ವರದಿ ಶಿವಮೊಗ್ಗ: 

ಶಿಕಾರಿಪುರ‌ ತಾಲ್ಲೂಕು ಜೆಡಿಎಸ್ ಮುಖಂಡ‌ ಹಾಗೂ ಕೆಎಎಸ್ ನಿವೃತ್ತ ಅಧಿಕಾರಿ ಎಚ್.ಟಿ‌. ಬಳಿಗಾರ್ ಮಾಜಿ‌ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾದರು.

ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡ‌ ಬಳಿಕ ಯಡಿಯೂರಪ್ಪನವರು ಮಾತನಾಡಿ, ಪಕ್ಷದ ಸಿದ್ಧಾಂತ ಒಪ್ಪಿ, ಪ್ರಧಾನಿ ಮೋದಿಯವರು ಮಾಡುತ್ತಿರುವ ಜನಪರ ಕೆಲಸಗಳನ್ನು‌ ಮೆಚ್ಚಿ ಬಂದಿರುವುದು ಸ್ವಾಗತಾರ್ಹ. ಅವರ ಅರ್ಹತೆಗೆ ತಕ್ಕಂತೆ ಪಕ್ಷದಲ್ಲಿ ಸ್ಥಾನಮಾನ ನೀಡಲಾಗುತ್ತದೆ ಎಂದರು.

ಬಹಳ ದಿನಗಳ‌ ಹಿಂದೆಯೇ ಅವರು ಪಕ್ಷಕ್ಕೆ ಬರಬೇಕಾಗಿತ್ತು. ಅದರೆ ಬೇರೆ ಬೇರೆ ಕಾರಣಕ್ಕೆ ಮುಂದೂಡಿದ್ದರು. ಸ್ವಯಂ ನಿವೃತ್ತಿ ಬಳಿಕ ಜನ ಸೇವೆ‌ಮಾಡುವ ಸಲುವಾಗಿ ರಾಜಕೀಯಕ್ಕೆ ಬಂದಿದ್ದರು. ಎರಡು ಬಾರಿ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆಗೆ ಸ್ಫರ್ಧೆ ಮಾಡಿ ಸಾಕಷ್ಟು ಮತಗಳನ್ನು ಪಡೆದಿದ್ದರು. ಈಗ ಬದಲಾವಣೆಗೆ ತೆರೆದುಕೊಂಡು ಬಂದಿರುವುದು ಪಕ್ಷಕ್ಕೆ ಇನ್ನಷ್ಟು ಬಲ‌ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಈಶ್ವರಪ್ಪ ಕೆ.ಬಿ. ಅಶೋಕ‌ನಾಯ್ಕ, ಸಚಿವ ಆರಗ ಜ್ಞಾನೇಂದ್ರ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಅಶೋಕ್ ನಾಯಕ್, ಎಸ್. ದತ್ತಾತ್ರಿ, ಟಿ.ಡಿ. ಮೇಘರಾಜ್ ಮೊದಲಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!