Sunday, February 5, 2023

Latest Posts

ಜೆಡಿಎಸ್ ಪಂಚರತ್ನ ಯಾತ್ರೆ: ತೊಗರಿ ಕಣಜ ಕಲಬುರಗಿಯಲ್ಲಿ ಭವ್ಯ ಸ್ವಾಗತ

ಹೊಸದಿಗಂತ ವರದಿ ಕಲಬುರಗಿ:

ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಗೆ ತೊಗರಿಯ ನಾಡು ಕಲಬುರಗಿಯೂ ಸಜ್ಜಾಗಿದ್ದು,ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಭವ್ಯ ಸ್ವಾಗತ ಕೋರಿ ಯಾತ್ರೆಗೆ ಚಾಲನೆ ನೀಡಲಾಗಿದೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಪ್ರಸಿದ್ಧ ಬೆಳೆಯಾದ ತೊಗರಿ ಬೆಳೆಯಿಂದ ಮಾಡಿದ ಬೃಹತ್ ಹಾರ ಹಾಕಿ,ಕಾಯ೯ಕತ೯ರು ಅದ್ದೂರಿಯಾಗಿ ಬರಮಾಡಿಕೊಂಡರು. ಏಷ್ಯಾ ಖಂಡದ ತೊಗರಿಯ ಕಣಜವೆಂದೆ ಪ್ರಖ್ಯಾತ ಪಡೆದಿರುವ ಕಲಬುರಗಿಯಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ಆರಂಭಗೊಂಡಿದ್ದು,ಆಳಂದ ಜೆಡಿಎಸ್ ಘಟಕದ ವತಿಯಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗೆ ಸ್ವಾಗತ ಕೋರಲಾಗಿದೆ.

ಖಜೂರಿ ಗ್ರಾಮದಿಂದ ಆರಂಭವಾದ ಪಂಚರತ್ನ ಯಾತ್ರೆ, ತಡೋಲಾ,ನಿರಗುಡಿ,ಪಡಸಾವಳಗಿ,ಸರಸಂಭಾ ಗ್ರಾಮಗಳಲ್ಲಿ ರೋಡ್ ಶೋ ಮಾಡಿ,ನಂತರ ಹಿರೋಳ್ಳಿ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!