SHOCKING | ಬಿಹಾರದಲ್ಲಿ ಜೆಡಿಯು ನಾಯಕ ಸೌರಭ್‌ ಕುಮಾರ್‌ ಭೀಕರ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಾಟ್ನಾದಲ್ಲಿ ಜನತಾ ದಳ ಯುನೈಟೆಡ್ ಯುವ ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಜೆಡಿಯು ನಾಯಕ ಸೌರಭ್‌ ಕುಮಾರ್‌ ತಲೆಗೆ ಎರಡು ಗುಂಡು ಹಾರಿಸಿ ಭೀಕರವಾಗಿ ಕೊಲ್ಲಲಾಗಿದೆ. ಸೌರಭ್‌ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಬೈಕ್‍ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

ಈ ವೇಳೆ ಸೌರಭ್ ಅವರ ತಲೆಗೆ ಎರಡು ಗುಂಡುಗಳು ತಗುಲಿವೆ. ದಾಳಿಯಲ್ಲಿ ಅವರ ಜೊತೆಗಿದ್ದ ಮುನ್ಮುನ್ ಎಂಬವರಿಗೂ ಮೂರು ಗುಂಡುಗಳು ತಗುಲಿದ್ದು ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅವರ ಜೊತೆಯಲ್ಲಿ ಮುನ್ಶುನ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!