ಬಡಗುತಿಟ್ಟಿನ ಯಕ್ಷಗಾನ ಧ್ರುವತಾರೆ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಕ್ಷಗಾನ‌ ಕ್ಷೇತ್ರದ ಬಡಗುತಿಟ್ಟಿನ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

ಅವರಿಗೆ 67 ವರ್ಷ ವಯಸ್ಸಾಗಿತ್ತು. ಅಲ್ಪ ಕಾಲದ ಅಸೌಖ್ಯದಲ್ಲಿ ಬಲಳುತ್ತಿದ್ದ ಅವರು ಪುತ್ರನ ಮನೆಯಲ್ಲಿ ನಿಧನರಾಗಿದ್ದಾರೆ.

ಪೆರ್ಡೂರು ಮೇಳದಲ್ಲಿ ಬರೋಬ್ಬರಿ 28 ವರ್ಷಗಳಲ್ಲಿ ಕಾಲ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದ ಧಾರೇಶ್ವರ, ಅದಕ್ಕೂ ಮುನ್ನ ಕೋಟ ಅಮೃತೇಶ್ವರಿ ಮೇಳದಲ್ಲಿ ಕೂಡಾ ಸೇವೆ ಸಲ್ಲಿಸಿದ್ದರು. ಇದಲ್ಲದೆ ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳದಲ್ಲೂ ಭಾಗವತರಾಗಿದ್ದರು.

1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು, ಸಂಗೀತದಲ್ಲೂ ಪ್ರೌಢಿಮೆ ಸಾಧಿಸಿದ್ದರು.
ರಂಗಭೂಮಿ ಸಖ್ಯ ವನ್ನೂ ಹೊಂದಿದ್ದ ಧಾರೇಶ್ವರ, ತಮ್ಮ‌ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳದ ತಿರುಗಾಟ ನಿಲ್ಲಿಸಿದ್ದರು. ಧಾರೇಶ್ವರ ಅವರ ಪಾರ್ಥೀವ ಶರೀರವನ್ನು ತಮ್ಮ ಕುಂದಾಪುರ ಕಿರಿಮoಜೇಶ್ವರಕ್ಕೆ ಇಂದು ಸಂಜೆ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!