ಹುಡುಗಿಯರ ಜೊತೆ ಸೇರಿ ಬಾಹ್ಯಾಕಾಶಕ್ಕೆ ಟ್ರಿಪ್‌ ಹೊಗಲಿದ್ದಾರಂತೆ ಜೆಫ್ ಬಿಜೋಸ್ ಗರ್ಲ್‌ ಫ್ರೆಂಡ್ ಲಾರೆನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೆಜಾನ್ ಸಂಸ್ಥಾಪಕ, ಕೋಟ್ಯಾಧಿಪತಿ ಜೆಫ್ ಬಿಜೋಸ್ 2021 ರಲ್ಲಿ ಬಾಹ್ಯಾಕಾಶಕ್ಕೆ ಪ್ರವಾಸ ತೆರಳಿ 11 ನಿಮಿಷಗಳನ್ನು ಕಳೆದಿದ್ದರು. ಅದಕ್ಕಾಗಿ ಅವರ ಬಾಹ್ಯಾಕಾಶ ಕಂಪನಿ ʼಬ್ಲೂ ಓರಿಜಿನ್ʼ ಬಿಜೋಸ್ ಬಾಹ್ಯಾಕಾಶ ಪ್ರಯಾಣಕ್ಕೆಂದೇ ವಿಶೇಷ ರಾಕೆಟ್‌ ರೂಪಿಸಿತ್ತು. ಇದೀಗ ಬಿಜೋಸ್‌ ಅವರ ಗೆಳತಿ ಲಾರೆನ್ ಸ್ಯಾಂಚೆಜ್ ಅವರ ಸರದಿ. ಆಕೆ ಸಹ ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಪ್ಲಾನ್‌ ಮಾಡಿಕೊಂಡಿದ್ದು,  ಬಿಜೋಸ್‌ ರನ್ನು ಮಾತ್ರ ಜೊತೆಗೆ ಕರೆದೊಯ್ಯುವುದಿಲ್ಲ, ನಾವೆಲ್ಲ ಹುಡುಗಿಯರ ದೊಡ್ಡ ಗುಂಪೊಂದು ಅಲ್ಲಿಗೆ ಹೋಗಿಬರುತ್ತೇವೆ ಎಂದಿದ್ದಾಳೆ!.
ತನ್ನ ಸಹ-ಪ್ರಯಾಣಿಕರ ಹೆಸರನ್ನು ಲಾರೆನ್ ಬಹಿರಂಗಪಡಿಸದಿದ್ದರೂ, ಆಕೆ ಜೆಫ್ ಬೆಜೋಸ್ ಹೆಸರನ್ನು ತಳ್ಳಿಹಾಕಿದ್ದಾಳೆ. ʼಅದು ಹೆಣ್ಣುಮಕ್ಕಳ ದೊಡ್ಡ ಗುಂಪಾಗಿರಲಿದೆʼ  ಎಂದು ಅವರು ಹೇಳಿದ್ದಾರೆ.
ವಿಶ್ವದ ಟಾಪ್‌ ಶ್ರೀಮಂತರಲ್ಲೊಬ್ಬ, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌  2019 ರಿಂದ ಅಮೇರಿಕನ್ ಸುದ್ದಿ ನಿರೂಪಕಿ ಲಾರೆನ್ ಸ್ಯಾಂಚೆಝ್ ಜೊತೆಗೆ ರಿಲೇಶನ್ ಶಿಪ್ ನಲ್ಲಿ ಇದ್ದಾರೆ. ಬಿಜೋಸ್‌ ಹಾಗೂ ಪತ್ನಿ ಮ್ಯಾಕೆಂಜಿ ಸ್ಕಾಟ್‌ 25 ವರ್ಷಗಳ ದಾಂಪತ್ಯ ಜೀವನದಿಂದ ಇತ್ತೀಚೆಗೆ ವಿಚ್ಛೇದನ ಪಡೆದಿದ್ದರು.
ಕಳೆದ ವರ್ಷ ತಮ್ಮ ಮೂವರು ಸಂಗಡಿಗರ ಜೊತೆಗೂಡಿ ಬೆಜೋಸ್‌ ಬಾಹ್ಯಾಕಾಶವನ್ನು ತಲುಪಿ, ಅಲ್ಲಿ ಶೂನ್ಯ ಗುರುತ್ವಾಕರ್ಷಣೆಯಲ್ಲಿ ತೇಲಿ ಭೂಮಿಗೆ ಮರಳಿದ್ದರು. ಈ ಪ್ರವಾಸ ಬಾಹ್ಯಾಕಾಶ ಪ್ರವಾಸೋದ್ಯಮದ ಹೊಸ ಸಾಧ್ಯತೆ ತೆರೆದಿಟ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!