ರಾಜಕೀಯ ಅಖಾಡಕ್ಕೆ ಜಾರ್ಖಂಡ್ ಮಾಜಿ ಸಿಎಂ ಪತ್ನಿ: ಉಪಚುನಾವಣೆಯಲ್ಲಿ ಸ್ಪರ್ಧೆಗೆ ತಯಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಅವರು ರಾಜಕೀಯ ಅಖಾಡಕ್ಕೆ ಇಳಿದಿದ್ದು, ಜಾರ್ಖಂಡ್ ನ ಗಂಡೇ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಗಂಡೇ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಕಲ್ಪನಾ ಸ್ಪರ್ಧಿಸಲಿದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷ ಗುರುವಾರ ಪ್ರಕಟಿಸಿದೆ.

ಜಾರ್ಖಂಡ್‌ನ ಗಂಡೇ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ದಿಲೀಪ್ ಕುಮಾರ್ ವರ್ಮಾ ಅವರನ್ನು ಕಣಕ್ಕಿಳಿಸಿದೆ.

ಇತ್ತ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಜೈಲಿನಲ್ಲಿದ್ದಾರೆ. ಎಂಟೆಕ್ ಮತ್ತು ಎಂಬಿಎ ವಿದ್ಯಾರ್ಹತೆಗಳನ್ನು ಹೊಂದಿರುವ ಗೃಹಿಣಿ ಕಲ್ಪನಾ ಅವರು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಬರಿಪಾಡಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಅವರು ಭುವನೇಶ್ವರದಲ್ಲಿರುವ ವಿಭಿನ್ನ ಸಂಸ್ಥೆಗಳಿಂದ ಎಂಜಿನಿಯರಿಂಗ್ ಮತ್ತು MBA ಪದವಿಗಳನ್ನು ಪಡೆದರು.

ಅವರು ಮೂಲತಃ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯವರು. ಕಲ್ಪನಾ ಫೆಬ್ರವರಿ 7, 2006 ರಂದು ಹೇಮಂತ್ ಸೋರೆನ್ ಅವರನ್ನು ವಿವಾಹವಾದರು. ಕಲ್ಪನಾ ಮತ್ತು ಹೇಮಂತ್ ಅವರಿಗೆ ನಿಖಿಲ್ ಮತ್ತು ಅಂಶ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಅವರ ಪತಿ ಹೇಮಂತ್ ಸೊರೆನ್ ಅವರನ್ನು ಜನವರಿ 31 ರಂದು ಜಾರಿ ನಿರ್ದೇಶನಾಲಯವು ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು.

ಗಂಡೇ ವಿಧಾನಸಭಾ ಉಪಚುನಾವಣೆ
ರಾಜ್ಯದಲ್ಲಿ ಸಂಸತ್ ಚುನಾವಣೆಗೆ ಹೊಂದಿಕೆಯಾಗುವಂತೆ ಗಂಡೇ ಕ್ಷೇತ್ರಕ್ಕೆ ಮೇ 20 ರಂದು ಉಪಚುನಾವಣೆ ನಿಗದಿಯಾಗಿದೆ. ಗಿರಿದಿಹ್ ಜಿಲ್ಲೆಯಲ್ಲಿರುವ ಈ ಸ್ಥಾನವು ಜೆಎಂಎಂ ಶಾಸಕ ಸರ್ಫರಾಜ್ ಅಹ್ಮದ್ ರಾಜೀನಾಮೆಯಿಂದ ತೆರವಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!