ಲಾರ್ಡ್ಸ್​​ ಮೈದಾನದಲ್ಲಿ ಜೂಲನ್​ ಗೋಸ್ವಾಮಿಗೆ ಸಿಕ್ಕಿತು ಗಾರ್ಡ್​ ಆಫ್​ ಹಾನರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ ಮತ್ತು ಅತಿ ಹೆಚ್ಚು ವಿಕೆಟ್​ ಪಡೆದ ವಿಶ್ವದ ಮೊದಲ, ಅತಿಹೆಚ್ಚು ಏಕದಿನ ಪಂದ್ಯವಾಡಿದ ವಿಶ್ವದ 2ನೇ ಮಹಿಳಾ ಕ್ರಿಕೆಟರ್​ ​ ಜೂಲನ್​ ಗೋಸ್ವಾಮಿ. ಇಂದು ತಮ್ಮ ಅಂತಿಮ ಪಂದ್ಯವನ್ನು ಇಂಗ್ಲೆಂಡ್​ ವಿರುದ್ಧ ಆಡುತ್ತಿದ್ದಾರೆ .

ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜೂಲನ್​ ಗೋಸ್ವಾಮಿ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲು ಮೈದಾನಕ್ಕೆ ಆಗಮಿಸಿದಾಗ ಇಂಗ್ಲೆಂಡ್​ ವನಿತೆಯರು ಇಕ್ಕೆಲಗಳಲ್ಲಿ ಸಾಲಾಗಿ ನಿಂತು (ಗಾರ್ಡ್​ ಆಫ್​ ಹಾನರ್) ಹಿರಿಯ ಆಟಗಾರ್ತಿಗೆ ಗೌರವ ಸಲ್ಲಿಸಿದರು. ಎಲ್ಲರಿಗೂ ಧನ್ಯವಾದ ಗೋಸ್ವಾಮಿ ಅವರು ಆಟಗಾರರ ಮಧ್ಯೆ ನಡೆದು ಹೋದರು.

ಇನ್ನು ಪಂದ್ಯ ಆರಂಭಕ್ಕೂ ಮೊದಲು ಟಾಸ್​ ಮಾಡಲು ಇಂಗ್ಲೆಂಡ್​ ಮತ್ತು ಭಾರತ ತಂಡದ ನಾಯಕಿಯರು ಮೈದಾನಕ್ಕೆ ಆಗಮಿಸಿದಾಗ, ಹರ್ಮನ್​ಪ್ರೀತ್​ ಕೌರ್​ ಅವರ ಕೋರಿಕೆ ಮೇರೆಗೆ ಅಂತಿಮ ಪಂದ್ಯವನ್ನಾಡುತ್ತಿರುವ ಹಿರಿಯ ಆಟಗಾರ್ತಿ ಜೂಲನ್​ ಗೋಸ್ವಾಮಿ ಅವರು ಮೈದಾನಕ್ಕೆ ಆಗಮಿಸಿ ಟಾಸ್​ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!