ರಷ್ಯಾ ವಿರುದ್ದದ ಕದನದ ಸಮಯದಲ್ಲಿ ಉಕ್ರೇನ್‌ಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ ಜಿಲ್ ಬೈಡನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಉಕ್ರೇನ್‌ಗೆ ಅಮೆರಿಕ ಸಹಾಯ ಹಸ್ತ ಚಾಚಿದ್ದು, ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್ ಬೈಡನ್ ಉಕ್ರೇನ್‌ಗೆ ಭೇಟಿ ನೀಡಿದ್ದಾರೆ.
ಭಾನುವಾರ ಜಿಲ್ ಬೈಡನ್ ಉಕ್ರೇನ್‌ನ ನಿರಾಶ್ರಿತರು ವಾಸ್ತವ್ಯ ಹೂಡಿರುವ ಶಾಲೆಗಳಿಗೆ ಭೇಟಿ ನೀಡಿದರು. ಉಕ್ರೇನ್‌ ಅಧ್ಯಕ್ಷರ ಪತ್ನಿಯನ್ನು ಸಹ ಭೇಟಿ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.
ಕೆಲವು ದಿನಗಳ ಹಿಂದೆ ಉಕ್ರೇನ್‌ಗೆ ಸೇನಾ ನೆರವು ನೀಡುವುದಾಗಿಯೂ ಅಮೆರಿಕ ಘೋಷಣೆ ಮಾಡಿತ್ತು. ಪೆಂಟಗಾನ್‌ನ ಉನ್ನತ ಅಧಿಕಾರಿಗಳು ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ಸಹ ನೀಡಿದ್ದರು.
ಜಿಲ್ ಬೈಡನ್ ಉಕ್ರೇನ್ ಭೇಟಿ ಬಗ್ಗೆ ಮಾತನಾಡಿದ್ದು, ‘ಇಂದಿನ ಸಮಯದಲ್ಲಿ ಯುದ್ಧ ನಿಲ್ಲಿಸುವುದು ಅತ್ಯಗತ್ಯವಾಗಿದೆ. ಈ ಕಠೋರ ಸನ್ನಿವೇಶದಲ್ಲಿ ಅಮೆರಿಕ ಸಂಕಷ್ಟದಲ್ಲಿರುವ ಉಕ್ರೇನ್ ಪ್ರಜೆಗಳ ಜೊತೆ ಇದೆ’ ಎಂದು ಹೇಳಿದ್ದಾರೆ.
ಜಿಲ್ ಬೈಡನ್ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪತ್ನಿಯನ್ನು ಭೇಟಿ ಮಾಡಿರುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!