ಜಿನ್ನಾ ಒಬ್ಬ ಸ್ವಾತಂತ್ರ್ಯಹೋರಾಟಗಾರ, ದೇಶವಿಭಜಿಸಿ ಸರಿಯಾದ ಕೆಲಸ ಮಾಡಿದ್ದಾರೆ: ಮಧ್ಯ ಪ್ರದೇಶ ಕಾಂಗ್ರೆಸ್‌ ಶಾಸಕನ ದೇಶಾಘಾತುಕ ಹೇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತ ದೇಶವನ್ನು ವಿಭಜಿಸಿ ನೆಹರು ಮತ್ತು ಜಿನ್ನಾ ದೇಶವನ್ನು ವಿಭಜಿಸಿ ಸರಿಯಾದ ಕಾರ್ಯ ಮಾಡಿದ್ದಾರೆ. ಅವರ ಈ ಬುಧ್ಧಿವಂತಿಕೆಯ ಕಾರ್ಯವನ್ನು ಎಲ್ಲರೂ ಸ್ಮರಿಸಬೇಕು ಎಂದು ಮಧ್ಯ ಪ್ರದೇಶದ ಕಾಂಗ್ರೆಸ್‌ ಶಾಸಕ ಮತ್ತು ಮಾಜಿ ಸಚಿವ ಸಜ್ಜನ್‌ ಸಿಂಗ್‌ ವರ್ಮಾ ಹೇಳಿದ್ದಾರೆ.

ಬುಧವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು “ಮೊಹಮದ್‌ ಅಲಿ ಜಿನ್ನಾ ಒಬ್ಬ ಸ್ವಾತಂತ್ರ್ಯಹೋರಾಟಗಾರ, ಅವರು ದೇಶವನ್ನು ಒಡೆಯಲಿಲ್ಲ ಬದಲಾಗಿ ಪ್ರತ್ಯೇಕಿಸುವ ಮೂಲಕ ಸರಿಯಾದ ಕೆಲಸ ಮಾಡಿದ್ದಾರೆ. ಅವರೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನು ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂಬುದು ತಪ್ಪು. ಮುಸ್ಲಿಂ ಆದ ತಕ್ಷಣ ಸ್ವಾತಂತ್ರ್ಯ ಹೋರಾಟಗಾರನ ವ್ಯಾಖ್ಯಾನ ಬದಲಾಗುವುದಿಲ್ಲ” ಎಂದಿದ್ದಾರೆ.

“ಬಿಜೆಪಿಯವರು ಅವರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಜನವರಿ 26 ರ ಭಾಷಣದಲ್ಲಿ ಪ್ರಧಾನಿ ಮೋದಿಯವರು 1947 ರಲ್ಲಿ ದೇಶವನ್ನು ವಿಭಜಿಸಲು ಜವಾಹರಲಾಲ್ ನೆಹರು ಮತ್ತು ಜಿನ್ನಾ ಕಾರಣ ಎಂದು ಹೇಳಿದರು. ಅವರು ದೇಶವನ್ನು ವಿಭಜಿಸಿದ್ದರಿಂದಲೇ ತಾವು ಇಂದು ಅಧಿಕಾರದಲ್ಲಿರಲು ಕಾರಣ. ಅವರ ಈ ಬುದ್ಧಿವಂತಿಕೆಯ ಕಾರ್ಯವನ್ನು ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮುಂತಾದವರು ಸ್ಮರಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ.

ರಾಜಕೀಯವಾಗಿ ಇನ್ನೊಬ್ಬರನ್ನು ಟೀಕಿಸುವ ಸಲುವಾಗಿ ದೇಶಕ್ಕೆ ಮರ್ಮಾಘಾತ ಮಾಡಿದವರನ್ನು ಸಮರ್ಥಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಇದು ದೇಶಾಘಾತುಕ ನಡೆಯಲ್ಲವೇ? ಎಂದು ಜನಸಾಮಾನ್ಯ ಪ್ರಶ್ನೆ ಮಾಡುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!