ಜೂನ್‌ ತಿಂಗಳಲ್ಲಿ 4.2 ಮಿಲಿಯನ್ ಹೊಸ ಗ್ರಾಹಕರನ್ನು ಸಂಪಾದಿಸಿದೆ ಜಿಯೋ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
5ಜಿ ಹರಾಜಿನಲ್ಲಿ ವಿಜೇತನಾಗಿ ಹೊರಹೊಮ್ಮಿದ ರಿಲಯನ್ಸ್‌ ಜಿಯೋ ಇದೀಗ ಗ್ರಾಹಕರ ಸಂಪದನೆಯಲ್ಲೂ ಉಳಿದೆಲ್ಲ ಟೆಲಿಕಾಂ ಕಂಪನಿಗಳಿಗಿಂತ ಮುಂಚೂಣಿಯಲ್ಲಿದೆ. ಜೂನ್‌ ತಿಂಗಳಲ್ಲಿ 4.2 ಮಿಲಿಯನ್‌ ಹೊಸ ಗ್ರಾಹಕರು ರಿಲಯನ್ಸ್‌ ಜಿಯೋವನ್ನು ಸೇರಿಕೊಂಡಿದ್ದಾರೆ.

TRAI ವರದಿಯ ಪ್ರಕಾರ ಜಿಯೋದ ಪ್ರತಿಸ್ಪರ್ಧಿಗಳಾದ ಏರ್‌ಟೆಲ್ ಕೇವಲ 0.79 ಮಿಲಿಯನ್ ಗ್ರಾಹಕರನ್ನು ಪಡೆದುಕೊಂಡಿದ್ದರೆ ವೊಡಾಫೋನ್ ಐಡಿಯಾ 1.8 ಮಿಲಿಯನ್ ಬಳಕೆದಾರರನ್ನು ಕಳೆದುಕೊಂಡು ತನ್ನ ನಷ್ಟದ ಸರಣಿಯನ್ನು ಮುಂದುವರೆಸಿದೆ. 4.2 ಮಿಲಿಯನ್‌ ಹೆಚ್ಚಳದೊಂದಿಗೆ ಒಟ್ಟೂ 413 ಮಿಲಿಯನ್ ಚಂದಾದಾರರು ಜಿಯೋವನ್ನು ನೆಚ್ಚಿಕೊಂಡಿದ್ದಾರೆ.

ಏರ್‌ಟೆಲ್ ಒಟ್ಟೂ 362.9 ಮಿಲಿಯನ್ ಗ್ರಾಹಕರನ್ನು ಹೊಂದಿದ್ದರೆ ವೊಡಾಫೋನ್ ಐಡಿಯಾ 256.6 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಕಳೆದ ಒಂಭತ್ತು ತಿಂಗಳಿಂದ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದ ಜಿಯೋ ಈಗ ಸತತವಾಗಿ ಎರಡು ತಿಂಗಳುಗಳಲ್ಲಿ ಪ್ರಗತಿ ಸಾಧಿಸಿದೆ. ಮೇ ತಿಂಗಳಲ್ಲಿ 3.1 ಮಿಲಿಯನ್‌ ಗ್ರಾಹಕರು ಜಿಯೋಗೆ ಸೇರ್ಪಡೆಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!