ಕೇಂದ್ರ ಸರಕಾರದಿಂದ 7 ಭಾರತೀಯ, 1 ಪಾಕಿಸ್ತಾನಿ ಮೂಲದ ಯೂಟ್ಯೂಬ್‌ ಚಾನೆಲ್‌ ಬ್ಯಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ಎಂಟು ಯೂಟ್ಯೂಬ್‌ ಚಾನೆಲ್‌ ಅನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಎಂಟು ಯೂ ಟ್ಯೂಬ್‌ ಚಾನೆಲ್‌ಗಳ ಪೈಕಿ, ಭಾರತದ ಏಳು ಚಾನಲ್‌ಗಳು ಸೇರಿದ್ದರೆ, ಪಾಕಿಸ್ತಾನದ ಒಂದು ಚಾನೆಲ್‌ ಅನ್ನು ಬ್ಲಾಕ್‌ ಮಾಡಲಾಗಿದೆ.

ನಿರ್ಬಂಧಿತ ಚಾನಲ್‌ಗಳಿಂದ ನಕಲಿ, ಭಾರತ ವಿರೋಧಿ ವಿಷಯವ್ನನು ಹಂಚಿಕೆ ಮಾಡಲಾಗುತ್ತಿತ್ತುಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಚಾನೆಲ್‌ಗಳು ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ಸರ್ಕಾರ ಹೇಳಿದೆ.

ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ರಾಜ್ಯಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳ ದೃಷ್ಟಿಕೋನದಿಂದ ವಿಷಯವು ಸಂಪೂರ್ಣವಾಗಿ ಸುಳ್ಳು ಮತ್ತು ಸೂಕ್ಷ್ಮವಾಗಿದೆ ಎಂದು ಗಮನಿಸಲಾಗಿದೆಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಮೂಲಕ ಡಿಸೆಂಬರ್‌ನಿಂದ ಈವರೆಗೂ ಯೂಟ್ಯೂಬ್‌ನಲ್ಲಿ 102 ಚಾನಲ್‌ಗಳು ಮತ್ತು ಹಲವಾರು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.

ಲೋಕತಂತ್ರ ಟಿವಿ, ಯು ಆಂಡ್‌ ವಿ ಟಿವಿ, ಎಎಂ ರಜ್ವಿ, ಗೌರವಶಾಲಿ ಪವನ್ ಮಿಥಿಲಾಂಚಲ್, ಸೀ ಟಾಪ್‌ 5 ಟಿಎಚ್, ಸರ್ಕಾರಿ ಅಪ್‌ ಡೇಟ್‌, ಸಬ್‌ ಕುಚ್ ದೇಕೋ ಎನ್ನುವ ಏಳು ಭಾರತೀಯ ಚಾನೆಲ್‌ ಸರ್ಕಾರ ನಿರ್ಭಂಧಿಸಿದ್ದರೆ. ನ್ಯೂಸ್ ಕಿ ದುನಿಯಾ ಪಾಕಿಸ್ತಾನ ಮೂಲದ ಚಾನೆಲ್ ಆಗಿದ್ದು ಅದನ್ನು ಕೂಡ ಸರ್ಕಾರ ನಿರ್ಬಂಧಿಸಿದೆ. ಇದಲ್ಲದೇ ಒಂದು ಫೇಸ್ ಬುಕ್ ಖಾತೆ ಮತ್ತು ಎರಡು ಫೇಸ್ ಬುಕ್ ಪೋಸ್ಟ್ ಗಳನ್ನು ಬ್ಲಾಕ್ ಮಾಡಲಾಗಿದೆ.

ಭಾರತಯ ಮೂಲದ ಈ ಏಳು ಚಾನೆಲ್‌ಗಳು, ನಕಲಿ ಹಾಗೂ ಪ್ರಚೋದನಕಾರಿ ಥಂಬ್‌ನೇಲ್‌ಅನ್ನು ಬಳಸಿಕೊಳ್ಳುವುದರೊಂದಿಗೆ ತಮ್ಮ ನ್ಯೂಸ್‌ ಆಂಕರ್‌ಗಳು ಹಾಗೂ ನ್ಯೂಸ್‌ ಚಾಲೆನ್‌ಗಳ ಲೋಗೋಗಳನ್ನು ಬಳಸಿಕೊಂಡು, ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದವು ಎಂದುಸ ಸಚಿವಾಲಯವು ಹೇಳಿದೆ.

ಸಚಿವಾಲಯದಿಂದ ನಿರ್ಬಂಧಿಸಲಾದ ಎಲ್ಲಾ ಯೂಟ್ಯೂಬ್ ಚಾನೆಲ್‌ಗಳು ತಮ್ಮ ವೀಡಿಯೊಗಳಲ್ಲಿ ಕೋಮು ಸೌಹಾರ್ದತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭಾರತದ ವಿದೇಶಿ ಸಂಬಂಧಗಳಿಗೆ ಹಾನಿಕಾರಕವಾದ ಸುಳ್ಳು ವಿಷಯವನ್ನು ಹೊಂದಿರುವ ಜಾಹೀರಾತುಗಳನ್ನು ಪ್ರದರ್ಶಿಸುತ್ತಿವೆ ಎಂದು ಸರ್ಕಾರ ಒತ್ತಿಹೇಳಿದೆ.

ಭಾರತ ಸರ್ಕಾರವು ಅಧಿಕೃತ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಆನ್‌ಲೈನ್ ಸುದ್ದಿ ಮಾಧ್ಯಮ ಪರಿಸರವನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದೆ ಮತ್ತು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ತಡೆಯುತ್ತದೆಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!