ದೀಪಾವಳಿಗೆ 5ಜಿ ಸೇವೆ ಆರಂಭಿಸುವುದಾಗಿ ಘೋಷಿಸಿದ ಜಿಯೊ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಹು ನಿರೀಕ್ಷಿತ 5ಜಿ ಸೇವೆಯ ಪ್ರಾರಂಭದ ಕುರಿತಾಗಿ ಜಿಯೋ ಸಂಸ್ಥೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಈ ವರ್ಷದ ದೀಪಾವಳಿಯ ಸಂದರ್ಭದಲ್ಲಿ 5ಜಿ ಸೇವೆಗಳು ಲಭ್ಯವಾಗಲಿದೆ ಎಂದು ರಿಲಯನ್ಸ್‌ ಸಮೂಹಗಳ ಅಧ್ಯಕ್ಷ ಮುಖೇಶ್‌ ಅಂಬಾನಿ ತಿಳಿಸಿದ್ದಾರೆ.

ಇಂದು ರಿಲಿಯನ್ಸ್‌ ಸಮೂಹಗಳ ವಾರ್ಷಿಕ ಸರ್ವಸಾಧಾರಣ ಸಭೆಯ ಬಳಿಕ ಇಂಥದ್ದೊಂದು ಘೋಷಣೆಯನ್ನು ಅಂಬಾನಿ ಮಾಡಿದ್ದಾರೆ. ಈ ಹಿಂದೆ 5ಜಿ ಸೇವೆಗಳ ಕುರಿತಾಗಿ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಊಹಿಸಲಾಗಿತ್ತು.ಪ್ರಸ್ತುತ ಅಂಬಾನಿಯವರೇ ಈ ಕುರಿತಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ.

“2022 ದೀಪಾವಳಿ ಹೊತ್ತಿಗೆ ದೆಹಲಿ, ಮುಂಬೈ, ಚೆನ್ನೈ ಕೋಲ್ಕತ್ತಾ ಮುಂತಾದ ಮೆಟ್ರೋ ಪಟ್ಟಣಗಳೂ ಸೇರಿದಂತೆ ದೇಶದ ಪ್ರಮುಖ ಪಟ್ಟಣಗಳಲ್ಲಿ ಜಿಯೋ 5ಜಿ ಕಾರ್ಯಾರಂಭ ಮಾಡಲಿದೆ. 2023ರ ಡಿಸೆಂಬರ್ ವೇಳೆಗೆ ಪ್ರತಿ ಪಟ್ಟಣ, ತಾಲೂಕು, ಗ್ರಾಮಗಳಲ್ಲೂ 5ಜಿ ಸೇವೆಗಳು ಲಭ್ಯವಾಗಲಿದೆ” ಎಂದು ಮುಖೇಶ್‌ ಅಂಬಾನಿ ಹೇಳಿರುವುದಾಗಿ ಮೂಲಗಳುವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!