ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಜಿಯೋ ನೆಟ್‌ವರ್ಕ್ ಡೌನ್ ಆಗಿದ್ದು, ಮೆಸೇಜ್ ಹಾಗೂ ಕಾಲ್ ಮಾಡಲಾಗದೆ ಜಿಯೋ ಗ್ರಾಹಕರು ಸಮಸ್ಯೆ ಎದುರಿಸಿದ್ದಾರೆ.
ಟ್ವಿಟರ್‌ನಲ್ಲಿ ಜಿಯೋ ಡೌನ್ ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿದೆ. ಬೆಳಗ್ಗೆಯಿಂದಲೇ ಕರೆ ಮಾಡುವ ಹಾಗೂ ಮೆಸೇಜ್ ಕಳಿಸುವ ಸೇವೆಯಲ್ಲಿ ವ್ಯತ್ಯಯವಾಗಿದೆ. ಆದರೆ ಡೇಟಾ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ವಾಟ್ಸಾಪ್ ಕಾಲ್‌ನಲ್ಲಿ ಬಹುಕಾಲ ಎಲ್ಲರೂ ವ್ಯವಹರಿಸಿದ್ದಾರೆ.
#Jiodown situation when you have jio fiber , jio sim and jio mobile. And the network is down. pic.twitter.com/kI6vagk9SP
— AnishKumar Agarwal (@AnIsH_261290) November 29, 2022
ಬೆಳಗ್ಗೆ 6 ರಿಂದ 9 ರವರೆಗೆ ಜಿಯೋ ನೆಟ್‌ವರ್ಕ್ ಡೌನ್ ಎದುರಾಗಿದೆ. ಶೇ.37 ರಷ್ಟು ಜನರಿಗೆ ಜಿಯೋ ಸಿಗ್ನಲ್ ಕಾಣಿಸಿಲ್ಲ. ಶೇ. 26ರಷ್ಟು ಮಂದಿ ಮೆಸೇಜ್ ಕಳುಹಿಸುವುದು ಸಾಧ್ಯವಾಗಿಲ್ಲ. ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಅಹಮದಾಬಾದ್‌ನಲ್ಲಿ ಸಮಸ್ಯೆ ಕಾಣಿಸಿದೆ.