ಜೀವ ಉಳಿಸೋ ಆಂಬುಲೆನ್ಸ್‌ ಸಿಬ್ಬಂದಿಗೆ 3 ತಿಂಗಳಿನಿಂದ ಸಂಬಳ ಇಲ್ಲ, ಪ್ರತಿಭಟನೆಗೆ ಸಜ್ಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕ ಸರ್ಕಾರದ ವಿರುದ್ಧ ಹೋರಾಟ ನಡೆಸಲು 108 ಅಂಬುಲೆನ್ಸ್‌ ಸಿಬ್ಬಂದಿ  ಮುಂದಾಗಿದ್ದಾರೆ.

3 ತಿಂಗಳಿನಿಂದ ನಮಗೆ ಸಂಬಳ ಸಿಕ್ಕಿಲ್ಲ. ಹೀಗಾಗಿ ನ.16ರ ರಾತ್ರಿ 8 ಗಂಟೆಯ ಒಳಗಡೆ ಸಂಬಳವನ್ನು ಬಿಡುಗಡೆ ಮಾಡಬೇಕು. ಅಂದು ಸಂಬಳ ಪಾವತಿಯಾಗದೇ ಇದ್ದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ ನೌಕರರ ಸಂಘ, ಅಖಿಲ ಕರ್ನಾಟಕ 108 ಅಂಬುಲೆನ್ಸ್‌ ನೌಕರರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಕವಚ(108) ಅಂಬುಲೆನ್ಸ್‌ ನೌಕರರರ ಸಂಘ ಎಚ್ಚರಿಕೆ ನೀಡಿದೆ.

ಆರೋಗ್ಯ ಕವಚ ಯೋಜನೆಯಲ್ಲಿ 2 ವರ್ಷಗಳಿಂದ ವೇತನದಲ್ಲಿ ಅನೇಕ ಸಮಸ್ಯಗಳಿವೆ. ಸರ್ಕಾರ, ಸಂಸ್ಥೆ ಮತ್ತು ಸಂಘಟನೆಗಳು ಸಭೆ ನಡೆಸಿದರೂ ವೇತನದ ಸಮಸ್ಯೆ ಬಗೆಹರಿದಿಲ್ಲ. ಸಂಘಟನೆಯ ವತಿಯಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ನ್ಯಾಯಾಲಯವು ಸೆಪ್ಟೆಂಬರ್ 12ರಂದು ಮಧ್ಯಂತರ ಆದೇಶ ನೀಡಿತ್ತು. ನ್ಯಾಯಾಲಯ ಆದೇಶ ನೀಡಿದರೂ ಆರೋಗ್ಯ ಇಲಾಖೆ ಅಂಬುಲೆನ್ಸ್‌ ಸಿಬ್ಬಂದಿಯ ಸಂಬಳದ ಬಗ್ಗೆ ನಿರ್ಲಕ್ಷ್ಯ ತೋರಿದೆ. ಈ ಕಾರಣಕ್ಕೆ ಅನಿವಾರ್ಯವಾಗಿ ನಾವು ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿವೆ.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!