Tuesday, August 16, 2022

Latest Posts

ಕೊಚ್ಚಿ ಹೋದ ಸೇತುವೆಯ ರಾತ್ರೋರಾತ್ರಿ ಮತ್ತೆ ಕಟ್ಟಿಕೊಟ್ಟ ಭಾರತೀಯ ಸೇನಾ ಯೋಧರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಾಪಮಾನದಲ್ಲಿ ಹಠಾತ್‌ ಏರಿಕೆಯಿಂದಾಗಿ ಬಾಲ್ಟಾಲ್‌ನ ಬ್ರಾರಿಮಾರ್ಗ್ ಬಳಿ ಭೂಕುಸಿತದಿಂದ ಎರಡು ಸೇತುವೆ ಸಂಪೂರ್ಣ ಕೊಚ್ಚಿಹೋಗಿತ್ತು. ಅಮರನಾಥ ಯಾತ್ರಿಕರಿಗೆ ತೊಂದರೆಯಾದಂತೆ ಭಾರತೀಯ ಸೇನೆಯ ರಾತ್ರೋರಾತ್ರಿ ಸೇತುವೆ ನಿರ್ಮಾಣ ಮಾಡಿ ದಾಖಲೆ ಬರೆದಿದೆ.

ಜುಲೈ 1 ರಂದು, ಬಾಲ್ಟಾಲ್ ಅಕ್ಷದ ಬ್ರಾರಿಮಾರ್ಗ್ ಬಳಿ ಸೇತುವೆ ಕುಸಿದಿರುವ ವಿಚಾರವನ್ನು ನಾಗರಿಕ ಆಡಳಿತ ಚಿನಾರ್‌ ಕಾಪ್ಸ್‌ಗೆ ತಿಳಿಸಿದೆ. ನಾಶವಾದ ಸೇತುವೆಗಳ ಮರುಸ್ಥಾಪನೆಗಾಗಿ  ಚಿನಾರ್ ಕಾರ್ಪ್ಸ್ ಸಹಯೋಗದೊಂದಿಗೆ ಬೆಳಗಾಗುವುದರೊಳಗೆ ಸೇತುವೆ ಮರುನಿರ್ಮಾಣ ಮಾಡಿ ಯಾತ್ರಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಮರನಾಥ ಯಾತ್ರೆ ಸುಗಮವಾಗಿ ನಡೆಯಲು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ನಾಗರಿಕ ಆಡಳಿತಕ್ಕೆ ಸಹಾಯ ಮಾಡುತ್ತಿದೆ.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss