ಹೊಸದಿಗಂತ ಡಿಜಿಟಲ್ ಡೆಸ್ಕ್
ಆನ್‌ಲೈನ್ ಮ್ಯಾಗಜೀನ್‌ನಲ್ಲಿ ದೇಶದ್ರೋಹಿ ಲೇಖನ ಬರೆದಿದ್ದ ಕಾಶ್ಮೀರ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ವಾಂಸನೊಬ್ಬನನ್ನು ರಾಜ್ಯದ ತನಿಖಾ ಸಂಸ್ಥೆಯು ಬಂಧಿಸಿದೆ.
ಅಬ್ದುಲ್ ಆಲಾ ಫಾಜಿಲಿ ಬಂಧಿತ ವಿಧ್ವಾಂಸ. ಭಯೋತ್ಪಾದನೆ ಮತ್ತು ದೇಶ ವಿರೋಧಿ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಎಸ್‌ಐಎ ನಗರದ ಹಲವು ಸ್ಥಳಗಳಲ್ಲಿ ಶೋಧ ಕೈಗೊಂಡಿತ್ತು. ಈ ವೇಳೆ ಅಬ್ದುಲ್ ಆಲಾ ಫಾಜಿಲಿಯನ್ನು ಅವರ ಹುಮ್ಹಮಾ ನಿವಾಸದಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲಾ ಫಾಜಿಲಿ ಜೊತೆಗೆ ಆತನ ಲೇಖನ ಪ್ರಕಟಿಸಿದ್ದ ʼದಿ ಕಾಶ್ಮೀರ್ ವಾಲʼ ಎಂಬ ಡಿಜಿಟಲ್ ನಿಯತಕಾಲಿಕೆಯ ಸಂಪಾದಕ ಫಹಾದ್ ಶಾ ಹಾಗೂ ಅವರ ಸಹಚರರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳ ಮೇಲೆ ವಿವಿಧ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ಎಫ್ ಐಆರ್ ಗಳು ದಾಖಲಾಗಿದ್ದವು. ಅವರಂತೆ ಆರೋಪಿಗಳ ಮನೆ ಮೇಲೆ ದಾಳಿನಡೆಸಿ ಶೋಧಕಾರ್ಯ ನಡೆಸಿದ ಎಸ್‌ಐಎ ಅಧಿಕಾರಿಗಳು ಕಂಪ್ಯೂಟರ್ ನಲ್ಲಿ ಶೇಖರಿಸಿಟ್ಟಿದ್ದ ಪ್ರಮುಖ ಫೈಲ್ ಗಳು, ಲ್ಯಾಪ್ ಟಾಪ್ ಹಾಗೂ ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿಶ್ವವಿದ್ಯಾಲಯದ ಫಾರ್ಮಾಸ್ಯುಟಿಕಲ್ ಸೈನ್ಸ್ ವಿಭಾಗದಲ್ಲಿ ಪಿಎಚ್‌ಡಿ ವಿದ್ವಾಂಸನಾಗಿದ್ದ ಅಲಾ ಫಜಿಲಿಯು ದೇಶದ್ರೋಹಿ ಲೇಖನವನ್ನು ಪ್ರಕಟಿಸಿದ್ದ.
ʼಗುಲಾಮಗಿರಿಯ ಸಂಕೋಲೆಗಳು ಮುರಿಯುತ್ತವೆʼ ಎಂಬ ಶೀರ್ಷಿಕೆಯಡಿ ಆತ ಬರೆದ ಲೇಖನವು ಜನರನ್ನು ಪ್ರಚೋದಿಸುವ, ದೇಶದ್ರೋಹಿತನ ಬಿತ್ತುವ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿತ್ತು. ಇದರಲ್ಲಿ ಭಯೋತ್ಪಾದನೆಯನ್ನು ವೈಭವೀಕರಿಸುವ ಮೂಲಕ ಯುವಕರು ಹಿಂಸಾಚಾರದ ಹಾದಿ ಹಿಡಿಯುವಂತೆ ಪ್ರೇರೇಪಿಸುವ ಉದ್ದೇಶದಿಂದ ಈ ಲೇಖನ ಬರೆಯಲಾಗಿತ್ತು ಎಂದು ಅಧಿಕಾರಿ ಹೇಳಿದರು.
ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಮುರಿಯುವ ಗುರಿಯನ್ನು ಪಜಿಲಿ ಹೊಂದಿದ್ದ. ಇದಕ್ಕಾಗಿ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರನ್ನು ವೈಭವೀಕರಿಸಲು ಲೇಖನದಲ್ಲಿ ಅನೇಕ ಸುಳ್ಳು ವಿಚಾರಗಳನ್ನು ತುಂಬಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ