ಒಂಬತ್ತು ರಾಜ್ಯಗಳಿಗೆ ವ್ಯಾಪಿಸಿದ ಜೆಎನ್.1: ಮೊದಲ ಸ್ಥಾನದಲ್ಲಿ ಕೇರಳ, ದ್ವಿತೀಯದಲ್ಲಿ ಗುಜರಾತ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಇದುವರೆಗೆ ದೃಢಪಟ್ಟಿರುವ ಕೋವಿಡ್ ರೂಪಾಂತರಿ ಜೆಎನ್.1 ಪ್ರಕರಣಗಳ ಪೈಕಿ ಅತೀ ಹೆಚ್ಚು ಕೇರಳ ರಾಜ್ಯದಲ್ಲಿಯೇ ಇದೆ ಎನ್ನುವುದು ಖಚಿತಗೊಂಡಿದೆ.

ಜೆಎನ್-1 ಸೋಂಕಿತರ ಸಂಖ್ಯೆಯಲ್ಲಿ ಗುಜರಾತ್ ಎರಡನೇ ಸ್ಥಾನದಲ್ಲಿದೆ. ಕೇರಳದಲ್ಲಿ 76, ಗುಜರಾತ್‌ನಲ್ಲಿ 34, ಗೋವಾದಲ್ಲಿ 18, ಕರ್ನಾಟಕದಲ್ಲಿ 8, ಮಹಾರಾಷ್ಟ್ರದಲ್ಲಿ 7, ರಾಜಸ್ಥಾನದಲ್ಲಿ 5, ತಮಿಳ್ನಾಡಿನಲ್ಲಿ 4, ತೆಲಂಗಾಣದಲ್ಲಿ 2, ಹಾಗೂ ದೆಹಲಿಯಲ್ಲಿ 1 ಸಕ್ರೀಯ ಪ್ರಕರಣಗಳಿವೆ.

ಕೋವಿಡ್ ರೂಪಾಂತರಿ ಈಗ ದೇಶದ ಒಂಬತ್ತು ರಾಜ್ಯಗಳಿಗೆ ವಿಸ್ತರಿಸಿದೆ. ಈ ನಡುವೆ ಕೇರಳಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗಿಗೆ ರೂಪಾಂತರಿ ಹೊಸ ತಲೆನೋವಾಗಿ ಕಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!