Friday, December 8, 2023

Latest Posts

ತಾಂಜೇನಿಯಾದ ಅಧ್ಯಕ್ಷೆಗೆ ಜೆಎನ್​ಯು ಗೌರವ ಡಾಕ್ಟರೇಟ್​ ಪ್ರದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್​ಯು) ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಗೌರವ ಡಾಕ್ಟರೇಟ್​ ಪದವಿ ಪ್ರದಾನ ಮಾಡಿದೆ .

ತಾಂಜೇನಿಯಾದ ಅಧ್ಯಕ್ಷೆ ಸಮಿಯಾ ಸುಲುಹು ಹಸನ್ ಅವರಿಗೆ ಮಂಗಳವಾರ ಡಾಕ್ಟರೇಟ್​ ನೀಡಲಾಗಿದೆ.

ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಧ್ಯಕ್ಷೆ ಸಮಿಯಾ ಅವರು ಭಾರತ ಮತ್ತು ತಾಂಜೇನಿಯಾ ಸಂಬಂಧಗಳ ವೃದ್ಧಿ, ಆರ್ಥಿಕ, ರಾಜತಾಂತ್ರಿಕತೆಯ ಉತ್ತೇಜನ, ಪ್ರಾದೇಶಿಕ ಏಕೀಕರಣ ಮತ್ತು ಬಹುಪಕ್ಷೀಯತೆಯಲ್ಲಿ ಸಾಧಿಸಿದ ಯಶಸ್ಸಿಗೆ ಈ ಗೌರವ ನೀಡಿ ಪುರಸ್ಕರಿಸಲಾಗಿದೆ.

ಸಂಗೀತಕ್ಕೆ ಮನಸೋತ ಅಧ್ಯಕ್ಷೆ
ಭಾರತ ಪ್ರವಾಸದಲ್ಲಿರುವ ತಾಂಜೇನಿಯಾದ ಅಧ್ಯಕ್ಷೆ ಸಮಿಯಾ ಸುಲುಹು ಹಸನ್​ ಮತ್ತು ಅಧಿಕಾರಿಗಳ ನಿಯೋಗ ದೆಹಲಿಯ ಹೈದರಾಬಾದ್​ ನಿವಾಸದಲ್ಲಿ ತಾಂಜೇನಿಯಾ ಸಂಗೀತವನ್ನು ಆನಂದಿಸಿ ಕುಣಿದು ಸಂಭ್ರಮಿಸಿದ್ದರು. ಭೋಜನಕೂಟದ ವೇಳೆ ಭಾರತದ ಕಲಾವಿದರು ತಾಂಜೇನಿಯಾ ಸಂಗೀತ ನುಡಿಸಿದರು. ಇದಕ್ಕೆ ಮನಸೋತ ಅಧ್ಯಕ್ಷೆ ಸಮಿಯಾ ಮತ್ತು ಅಧಿಕಾರಿಗಳು ನೃತ್ಯ ಮಾಡುತ್ತಾ ಸಂಗೀತವನ್ನು ಆಸ್ವಾದಿಸಿದರು. ಇದರ ಜೊತೆಗೆ ಸಾಮಿಯಾ ಸುಲುಹು ಅವರು ರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!