ನವೋದ್ದಿಮೆಗಳಲ್ಲಿ ಉದ್ಯೋಗ ಕಡಿತ: 41 ಉದ್ಯೋಗಿಗಳನ್ನು ವಜಾಗೊಳಿಸಿದ ಪ್ರಾಕ್ಟೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೆಲ್ತ್ ಟೆಕ್‌ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಹೆಲ್ತ್‌ಕೇರ್ ಪ್ಲಾಟ್‌ಫಾರ್ಮ್ ಪ್ರಾಕ್ಟೊ ಕಂಪನಿಯು ತನ್ನ 41 ಉದ್ಯೋಗಿಗಳನ್ನು ವಜಾಗೊಳಿಸಿದ್ದು ವಜಾಗೊಡವರಲ್ಲಿ ಬಹುತೇಕರು ಇಂಜಿನಿಯರ್‌ ಗಳಾಗಿದ್ದಾರೆ. ಕಂಪನಿಯು ತನ್ನ ಕಾರ್ಯಕ್ಷಮತೆಯ ನಿರ್ವಹಣೆ ಮತ್ತು ಯೋಜನಾ ಪ್ರಕ್ರಿಯೆಯ ಭಾಗವಾಗಿ ಈ ಉದ್ಯೋಗ ಕಡಿತಗಳನ್ನು ನಡೆಸಿದೆ.

ವಾಜಗೊಳಿಸುವಿಕೆ ಹೆಚ್ಚಾಗಿ ಇಂಜಿನಿಯರ್‌ ಗಳನ್ನು ಪ್ರಭಾವಿಸಿದ್ದು ವಿಶೇಷವಾಗಿ ಉತ್ಪನ್ನ ನಿರ್ವಾಹಕರು ಮತ್ತು ಸಾಫ್ಟ್‌ವೇರ್ ಎಂಜಿನಿಯರ್‌ಗಳಂತಹ ಪಾತ್ರಗಳು ವಜಾ ಬಿಸಿಯನ್ನು ಅನುಭವಿಸಿವೆ. ಪ್ರಸ್ತುತ ಜಾಗತಿಕ ಆರ್ಥಿಕ ಪ್ರಕ್ಷುಬ್ಧತೆಯಿಂದಾಗಿ ಹಣಕಾಸಿನ ಚಳಿಗಾಲ ಮುಂದುವರೆದಿದ್ದು ಈ ಕಾರಣದಿಂದ ಕಂಪನಿಯು ವೆಚ್ಚವನ್ನು ಕಡಿಮೆ ಮಾಡಿ ಕಾರ್ಯದಕ್ಷತೆ ಹೆಚ್ಚಿಸುವತ್ತ ಗಮನ ಹರಿಸುತ್ತಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!