ನ್ಯಾಟೋ ಸೇರುವ ಫಿನ್‌ಲ್ಯಾಂಡ್‌, ಸ್ವೀಡನ್‌ ಗಳ ನಿರ್ಧಾರವನ್ನು ಶ್ಲಾಘಿಸಿದ ಜೋ ಬಿಡೆನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನ್ಯಾಟೋ ಸೇರಲು ಬಯಸುತ್ತಿರುವ ಫಿನ್‌ಲ್ಯಾಂಡ್‌, ಸ್ವೀಡನ್‌ ಗಳ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಜೋ ಬಿಡೆನ್‌ ಶ್ಲಾಘಿಸಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣಕ್ಕೆ ವಿರುದ್ಧವಾಗಿ ಸ್ವೀಡನ್‌ ಮತ್ತು ಫಿನ್‌ಲ್ಯಾಂಡ್‌ ಎರಡೂ ದೇಶಗಳು ಉತ್ತರ ಅಟ್ಲಾಂಟಿಕ್‌ ರಕ್ಷಣಾ ಒಪ್ಪಂದದೊಂದಿಗೆ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದು ನ್ಯಾಟೋ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದವು.

ಸ್ವೀಡನ್‌ನ ಪ್ರಧಾನ ಮಂತ್ರಿ ಮ್ಯಾಗ್ಡಲೀನಾ ಆಂಡರ್ಸನ್ ಮತ್ತು ಫಿನ್‌ಲ್ಯಾಂಡ್‌ನ ಅಧ್ಯಕ್ಷ ಸೌಲಿ ನಿನಿಸ್ಟಾ  ನ್ಯಾಟೋ ರಕ್ಷಣಾ ಒಪ್ಪಂದ ಹಾಗೂ ಯುರೋಪಿಯನ್‌ ಭದ್ರತಾ ಕಾಳಜಿಗಳ ಕುರಿತು ತ್ರಿಪಕ್ಷೀಯ ಮಾತುಕತೆಗಳಿಗಾಗಿ ಶ್ವೇತ ಭವನಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಿದ ಜೋ ಬಿಡೆನ್‌ “ವಿಶ್ವದ ಪ್ರಬಲವಾದ ಹಾಗೂ ಅತ್ಯಂತ ಶಕ್ತಿಶಾಲಿ ರಕ್ಷಣಾ ಮೈತ್ರಿಗೆ ಸೇರಲು ನಿರ್ಧರಿಸಿರುವ ಎರಡು ಮಹಾನ್‌ ಪ್ರಜಾಪ್ರಭುತ್ವ ರಾಷ್ಟ್ರಗಳ ನಿರ್ಣಯವನ್ನು ನಾನು ಸ್ವಾಗತಿಸುತ್ತೇನೆ, ಅವರ ಈ ಸೇರ್ಪಡೆಯು ಉತ್ತರದಲ್ಲಿ ನಮ್ಮ ಮೈತ್ರಿಯ ಭದ್ರತೆಯನ್ನು ಹೆಚ್ಚಿಸುತ್ತದೆ” ಎಂದಿದ್ದಾರೆ.
ಫಿನ್‌ಲ್ಯಾಂಡ್‌, ಸ್ವೀಡನ್‌ ಗಳ ಈ ನಿರ್ಧಾರವು ರಷ್ಯಾಗೆ ಭಾರೀ ಮುಖಭಂಗವನ್ನುಂಟು ಮಾಡಿದೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!