ತೈವಾನ್​ ಮೇಲೆ ಚೀನಾ ಆಕ್ರಮಣ ಮಾಡಿದರೆ ನೇರ ಯುದ್ಧದ ಎಚ್ಚರಿಕೆ ನೀಡಿದ ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ತೈವಾನ್‌ ಮೇಲೆ ಚೀನಾದ ಆಕ್ರಮಣ ಮಾಡಿದ್ದೇ ಆದರೆ ಯುಎಸ್ ಪಡೆಗಳು ತೈವಾನ್ ಅನ್ನು ರಕ್ಷಿಸಲು ಧಾವಿಸುತ್ತವೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ನೇರ ಎಚ್ಚರಿಕೆ ನೀಡಿದ್ದಾರೆ. ತೈವಾನ್‌ ವಿಚಾರವಾಗಿ ಅಮೆರಿಕಾದ ಅತ್ಯಂತ ಸ್ಪಷ್ಟವಾದ ಹೇಳಿಕೆ ಇದಾಗಿದೆ.
ಭಾನುವಾರ ಸಿಬಿಎಸ್ ಸಂದರ್ಶನದಲ್ಲಿ ಮಾತನಾಡಿದ ಬಿಡೆನ್‌, ಚೀನಾದಿಂದ ಹಕ್ಕು ಸಾಧಿಸುತ್ತಿರುವ ತೈವಾನ್‌  ದ್ವೀಪವನ್ನು ರಕ್ಷಿಸಲು ಬದ್ಧ ಎಂದು ಹೇಳಿದ್ದಾರೆ. ಉಕ್ರೇನ್​ ಸಂಘರ್ಷದಲ್ಲಿ ಅಮೆರಿಕ ನೇರವಾಗಿ ಪಾಲ್ಗೊಂಡಿಲ್ಲ, ಆದರೆ ಅದೇ ಮಾದರಿಯಲ್ಲಿ ತೈವಾನ್‌ ಮೇಲೆ ಆಕ್ರಮಣ ನಡೆದರೆ ಅಮೆರಿಕ ಸೇನಾ ಯೋಧರು ನೇರವಾಗಿ ತೈವಾನ್ ರಕ್ಷಣೆಗೆ ಮುಂದಾಗುತ್ತಾರೆಯೇ’ ಎಂಬ ಪ್ರಶ್ನೆಗೆ, ಅಮೆರಿಕಾ ಸೇನೆ ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ತೈವಾನ್ ಬಗೆಗಿನ ಯುಎಸ್ ನೀತಿ ಬದಲಾಗಿಲ್ಲ ಎಂದು ಅವರು ತಿಳಿಸಿದರು.  ಕೆಲದಿನಗಳಿಂದ  ತೈವಾನ್ ಕೊಲ್ಲಿಯಲ್ಲಿ ಉದ್ವಿಗ್ನ ಸ್ಥಿತಿ ಏರ್ಪಟ್ಟಿದೆ. ಚೀನಾ ಆಕ್ರಮಣಗಳ ಭೀತಿಯಲ್ಲಿರುವ ತೈವಾನ್‌ ಗೆ ಅಮೆರಿಕಾ ನೇರ ಬೆಂಬಲ ಘೋಷಿಸಿದೆ. ಆಗಸ್ಟ್‌ನಲ್ಲಿ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಭೇಟಿ ನೀಡಿದ್ದರಿಂದ ಕೋಪಗೊಂಡಿದ್ದ ಚೀನಾದ ಯುದ್ಧವಿಮಾನಗಳು ತೈವಾನ್​ನ ವಾಯುಗಡಿ ದಾಟಿ ನುಗ್ಗಿದ್ದವು.  ಇದೀಗ ಬಿಡೆನ್ ಅವರ ಹೇಳಿಕೆಗಳು ಚೀನಾವನ್ನು ಮತ್ತುಷ್ಟು ಕೆರಳಿಸಲಿದ್ದು ಡ್ರಾಗನ್‌ ರಾಷ್ಟ್ರದ ಮುಂದಿನ ನಡೆ ಏನು ಎಂಬುದನ್ನು ಕಾದುನೋಡಬೇಕಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!