ಸೋಮವಾರ ನೀರಸವಾಗಿ ತೆರೆದ ಶೇರುಪೇಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತೀಯ ಶೇರು ಮಾರುಕಟ್ಟೆಯು ಸೋಮವಾರ ನೀರಸವಾಗಿ ತೆರೆದಿದೆ. ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ 9.07 ಪಾಯಿಂಟ್ ಅಥವಾ 0.02 ಶೇಕಡಾ ಏರಿಕೆಯಾಗಿ 58849.86 ಕ್ಕೆ ತಲುಪಿದೆ ಮತ್ತು ನಿಫ್ಟಿ 20.40 ಪಾಯಿಂಟ್ ಅಥವಾ 0.12 ರಷ್ಟು ಏರಿಕೆಯಾಗಿ 17551.20 ಕ್ಕೆ ತಲುಪಿದೆ.
ನಿಫ್ಟಿ ಸ್ಮಾಲ್‌ಕ್ಯಾಪ್ 100 ಮತ್ತು ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1 ರವರೆಗೆ ಕುಸಿದಿದ್ದರಿಂದ ವಿಶಾಲ ಮಾರುಕಟ್ಟೆಗಳು ಸಹ ವ್ಯಾಪಾರದಲ್ಲಿ ಕೆಳಮುಖವಾಗಿವೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಹೊರತುಪಡಿಸಿ, ಎಲ್ಲಾ ವಲಯಗಳು ಋಣಾತ್ಮಕ ವಲಯದಲ್ಲಿ ಮುಳುಗಿವೆ. ನಿಫ್ಟಿ ಮೀಡಿಯಾ, ನಿಫ್ಟಿ ಫಾರ್ಮಾ ಮತ್ತು ನಿಫ್ಟಿ ರಿಯಾಲ್ಟಿ ಸೂಚ್ಯಂಕಗಳು ಶೇಕಡಾ 1ಕ್ಕಿಂತ ಹೆಚ್ಚು ಕುಸಿದಿವೆ.

ಟಾಪ್ ಗೇನರ್ಸ್ ಮತ್ತು ಟಾಪ್ ಲೂಸರ್ಸ್:
ಬಜಾಜ್ ಫಿನ್‌ಸರ್ವ್, ಇನ್ಫೋಸಿಸ್, ಆಕ್ಸಿಸ್ ಬ್ಯಾಂಕ್ ಶೇರುಗಳು ತುಸು ಲಾಭ ಕಂಡಿವೆ.
HCL ಟೆಕ್ನಾಲಜೀಸ್, ಏಷ್ಯನ್ ಪೇಂಟ್ಸ್, ಡಾ ರೆಡ್ಡೀಸ್, ಟೈಟಾನ್ ಶೇರುಗಳು ಅಗ್ರ ನಷ್ಟ ಕಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!