ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ದಾಳಿ, ಮನುಷ್ಯ ದೇಹವನ್ನೇ ಆವಿ ಮಾಡುವಷ್ಟು ತೀವ್ರತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ-ಉಕ್ರೇನ್ ಯುದ್ಧದ ತೀವ್ರತೆ ಹೆಚ್ಚಾಗುತ್ತಿದೆ. ತಮ್ಮ ಗುರಿ ಉಕ್ರೇನ್ ವಶಪಡಿಸಿಕೊಳ್ಳುವುದಲ್ಲ, ಅಲ್ಲಿನ ನಾಗರಿಕರನ್ನು ಕೊಲ್ಲುವುದಲ್ಲ ಎಂದು ರಷ್ಯಾ ಹೇಳುತ್ತಲೇ ಬಂದಿದೆ.
ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ರಷ್ಯಾ ಉಕ್ರೇನ್ ಮೇಲೆ ಕ್ಲಸ್ಟರ್ ಬಾಂಬ್ ಮತ್ತು ವ್ಯಾಕ್ಯೂಮ್ ಬಾಂಬ್ ದಾಳಿ ಮಾಡುತ್ತಿದೆ ಎಂದು ಉಕ್ರೇನ್‌ನ ರಾಯಭಾರಿ ಆರೋಪಿಸಿದ್ದಾರೆ.

ವ್ಯಾಕ್ಯೂಮ್ ಬಾಂಬ್‌ಗಳನ್ನು ಥರ್ಮಾಬಾರಿಕ್ ಬಾಂಬ್‌ಗಳು ಎಂದೂ ಕರೆಯಲಾಗುತ್ತದೆ. ಈ ಬಾಂಬ್‌ಗಳನ್ನು ಯಾವ ಸ್ಥಳದ ಮೇಲೆ ಎಥವಾ ಜನರ ಮೇಲೆ ಎಸೆದರೆ, ಅಲ್ಲಿರುವ ವಸ್ತುಗಳ ಸಮೇತ ಎಲ್ಲಕ್ಕೂ ಅತಿ ಹೆಚ್ಚು ಉಷ್ಣತೆ ಹಾಗೂ ಒತ್ತಡ ಸೃಷ್ಟಿಯಾಗುತ್ತದೆ.

ಈ ರೀತಿ ಹಾನಿಕಾರಕ ವ್ಯಾಕ್ಯೂಮ್ ಮತ್ತು ಕ್ಲಸ್ಟರ್ ಬಾಂಬ್‌ಗಳ ದಾಳಿಯನ್ನು ಅಮ್ನೆಸ್ಟಿ ಇಂಟರ್‌ನ್ಯಾಷನಲ್, ಹ್ಯೂಮನ್ ರೈಟ್ಸ್ ವಾಚ್ ಸೇರಿ ಅನೇಕ ಸಂಸ್ಥೆಗಳು ಖಂಡಿಸಿವೆ.

ಉಕ್ರೇನ್ ರಾಯಭಾರಿ ಒಕ್ಸಾನಾ ಮಾರ್ಕರೋವಾ ಮಾತನಾಡಿ ಉಕ್ರೇನ್ ವ್ಯಾಕ್ಯೂಮ್ ಬಾಂಬ್ ದಾಳಿ ನಡೆಸುತ್ತಿದೆ. ಇದರಿಂದಾಗುವ ಹಾನಿ ತುಂಬಾ ದೊಡ್ಡದು. ಉಕ್ರೇನ್ ಮೇಲೆ ಯುದ್ಧ ಮಾಡಲು ರಷ್ಯಾ ನಿಷೇಧಿತ ಕ್ಲಸ್ಟರ್ ಯುದ್ಧಸಾಮಾಗ್ರಿಗಳನ್ನು ಬಳಸುವಂತೆ ತೋರುತ್ತಿದೆ ಎಂದಿದ್ದಾರೆ.

ವ್ಯಾಕ್ಯೂಮ್ ಬಾಂಬ್‌ನ ಉಷ್ಣತೆ ಹಾಗೂ ಒತ್ತಡ ಎಷ್ಟರಮಟ್ಟಿಗೆ ಇರುತ್ತದೆ ಎಂದರೆ ಇದು ಸ್ಫೋಟಿಸಿದ ನಂತರ ಮಾನವ ದೇಹವೇ ಆವಿಯಾಗಿ ಹೋಗುತ್ತದೆ. ಬಾಂಬ್ ಸ್ಫೋಟವಾದ ಸುತ್ತಮುತ್ತ ಜಾಗದಲ್ಲಿ ಇರುವ ಎಲ್ಲ ಆಮ್ಲಜನಕವನ್ನು ಹೀರಿಕೊಳ್ಳುತ್ತದೆ. ಸಾಮಾನ್ಯ ಬಾಂಬ್‌ಗಳಿಗಿಂತ ಈ ಬಾಂಬ್‌ನ ಸ್ಫೋಟದ ತರಂಗಗಳು ಹೆಚ್ಚು ಅವಧಿವರೆಗೆ ಇರುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!