ಅಮೆರಿಕ ಏರ್‌ಫೋರ್ಸ್‌ ಅಕಾಡೆಮಿ ಪದವಿ ಸಮಾರಂಭದಲ್ಲಿ ಮುಗ್ಗರಿಸಿದ ಜೋ ಬಿಡೆನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೊಲೊರಾಡೋದ ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ ಪದವಿ ಸಮಾರಂಭದಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ಮರಳು ಚೀಲದ ಮೇಲೆ ಮುಗ್ಗರಿಸಿ ಬಿದ್ದಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.

ಕೂಡಲೇ ಎದ್ದು ಮರಳಿ ತನ್ನ ಆಸನದ ಮೇಲೆ ಕುಳಿತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೊದಲ್ಲಿ, ಬಿಡೆನ್ ಯಾರ ಸಹಾಯವೂ ಇಲ್ಲದೆ, ನಡೆಯುತ್ತಿರುವುದು ಕಂಡುಬಂತು.

ಪ್ರಸ್ತುತ ಜೋ ಬಿಡೆನ್‌ ಆರೋಗ್ಯವಾಗಿದ್ದಾರೆಂದು ವೈಟ್ ಹೌಸ್ ಸ್ಪಷ್ಟಪಡಿಸಿದೆ. ಅಕಾಡೆಮಿಯ ಪದವೀಧರರ ಕುರಿತು ಮಾತನಾಡಿ ವೇದಿಕೆಯಿಂದ ನಿರ್ಗಮಿಸುವ ವೇಳೆ ಎಡವಿದ್ದಾಗಿ ತಿಳಿಸಿದರು. ಸುಮಾರು 90 ನಿಮಿಷಕ್ಕೂ ಹೆಚ್ಚು ಕಾಲ ನೂರಾರು ಪದವಿಧರರನ್ನು ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿದರು.

80 ವರ್ಷ ವಯಸ್ಸಿನ ಬಿಡೆನ್ ದೇಶದ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದಾರೆ. ಈ ರೀತಿ ಅವಘಡ ಇದೇ ಮೊದಲೇನಲ್ಲ, ಈ ಹಿಂದೆಯೂ ಅನೇಕ ಬಾರಿ ಎಡವಿ ಬಿದ್ದಿರುವ ಘಟನೆಗಳು ನಡೆದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!