ವಿಶ್ವದ ಮೊದಲ 3ಡಿ ಪ್ರಿಂಟೆಡ್ ದೇವಾಲಯ ಭಾರತದಲ್ಲಿ, ಹೇಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದಲ್ಲಿ ವಿಶ್ವದ ಮೊದಲ 3ಡಿ ಮುದ್ರಿತ ದೇವಾಲಯ ನಿರ್ಮಾಣವಾಗಲಿದೆ. ರಾಜ್ಯದ ಸಿದ್ದಿಪೇಟೆಯಲ್ಲಿ ಮೊದಲ 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ದೇವಸ್ಥಾನ ನಿರ್ಮಾಣವಾಗಲಿದೆ. ಹೈದರಾಬಾದ್ ಮೂಲದ ಪ್ರಮುಖ ನಿರ್ಮಾಣ ಕಂಪನಿ ಅಪ್ಪುಜಾ ಇನ್ಫ್ರಾಟೆಕ್ ಮತ್ತು ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್ ಜಂಟಿಯಾಗಿ ಈ ದೇವಾಲಯವನ್ನು ನಿರ್ಮಿಸಲಿವೆ. 3ಡಿ ಪ್ರಿಂಟಿಂಗ್ ದೇಶವನ್ನು ವಾಸ್ತುಶಿಲ್ಪದಲ್ಲಿ ವಿಶ್ವಗುರುವನ್ನಾಗಿ ಮಾಡಲಿದೆ ಎಂದು ಅಪ್ಪುಜ ಇನ್ಫ್ರಾಟೆಕ್ ಎಂಡಿ ಹರಿಕೃಷ್ಣ ಜೇಡಿಪಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದಿಪೇಟೆ ಜಿಲ್ಲೆಯ ಚಾರ್ವಿತಾ ಮೆಡೋಸ್‌ನಲ್ಲಿ ನಿರ್ಮಾಣವಾಗಲಿರುವ ಈ ದೇವಾಲಯವು ಸಂಸ್ಕೃತಿ, ಆಧುನಿಕ ತಂತ್ರಜ್ಞಾನದ ಜೊತೆಗೆ ಮಾನವನ ಸೃಜನಶೀಲ ಮತ್ತು ವಾಸ್ತುಶಿಲ್ಪದ ಕೌಶಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಲಾಗಿದೆ. ದೇವಾಲಯವು 3,800 ಚದರ ಅಡಿ ವಿಸ್ತೀರ್ಣ ಮತ್ತು ಮೂರು ಭಾಗಗಳಲ್ಲಿ 30 ಅಡಿ ಎತ್ತರವನ್ನು ಹೊಂದಿರುತ್ತದೆ. ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ ವಸ್ತು ಮತ್ತು ಸಾಫ್ಟ್‌ವೇರ್‌ನೊಂದಿಗೆ ನಿರ್ಮಿಸಲಾಗುತ್ತಿದೆ.

ಈ ದೇವಾಲಯವು ಮೂರು ಗರ್ಭಗುಡಿಗಳನ್ನು ಹೊಂದಿದೆ, ಒಂದನ್ನು ಗಣೇಶನಿಗೆ ಮತ್ತು ಇನ್ನೆರಡು ಶಿವ ಮತ್ತು ಪಾರ್ವತಿಗೆ ಸಮರ್ಪಿತವಾಗಿದೆ. ಮೋದಕಂನಲ್ಲಿ ಗಣೇಶ ದೇವಸ್ಥಾನ, ಚೌಕಾಕಾರದಲ್ಲಿ ಶಿವನ ದೇವಸ್ಥಾನ ಮತ್ತು ಕಮಲದ ಆಕಾರದಲ್ಲಿ ಪಾರ್ವತಿ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ. ಮೋದಕ ಮತ್ತು ಕಮಲದ ಆಕಾರವನ್ನು ವಿನ್ಯಾಸಗೊಳಿಸುವುದು ಸವಾಲಿನ ಸಂಗತಿ ಎಂದು ಹರಿಕೃಷ್ಣ ಬಹಿರಂಗಪಡಿಸಿದ್ದಾರೆ. ಇವುಗಳನ್ನು ದೇವಾಲಯದ ವಾಸ್ತು ವಿಧಾನಗಳ ಪ್ರಕಾರ ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ. ಈ 3ಡಿ ಪ್ರಿಂಟೆಡ್ ಮಂದಿರ ನಿರ್ಮಾಣದಿಂದ ರಾಜ್ಯಕ್ಕೆ ಮತ್ತೊಮ್ಮೆ ವಿಶೇಷ ಸ್ಥಾನಮಾನ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!