ಮುಂಡಗೋಡದಲ್ಲಿ ಬೆಲೆಬಾಳುವ ಸಾಗುವಾನಿ ತುಂಡುಗಳು ಪೊಲೀಸರ ವಶಕ್ಕೆ

ಹೊಸದಿಗಂತ ವರದಿ ಮುಂಡಗೋಡ:

ಅಕ್ರಮವಾಗಿ 50 ಸಾವಿರ ರೂಪಾಯಿ ಬೆಲೆ ಬಾಳುವ 22 ಸಾಗುವಾನಿ ತುಂಡುಗಳನ್ನು ದಾಸ್ತಾನು ಮಾಡಿಟ್ಟಿದ್ದ ಮನೆಯ ಹತ್ತಿರ ಖಚಿತ ಮಾಹಿತಿ ಪಡೆದ ಶಿರಸಿಯ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ಮಾಡಿ ಪ್ರಕರಣ ದಾಖಲಿಸಿದ ಘಟನೆ ಮಂಗಳವಾರ ಸಂಜೆ ಮೈನಳ್ಳಿ ಅರಣ್ಯ ವ್ಯಾಪ್ತಿಯ ಬಡ್ಡಿಗೇರಿ ಗ್ರಾಮದಲ್ಲಿ ಜರುಗಿದೆ.

ತಾಲೂಕಿನ ಬಡ್ಡಿಗೇರಿ ಗ್ರಾಮದ ಲಕ್ಕು ಜನ್ನು ಥೋರತ್ ಎಂಬುವವರ ಮನೆಯ ಹತ್ತಿರ ಅಕ್ರಮವಾಗಿ ಐವತ್ತು ಸಾವಿರ ರೂಪಾಯಿ ಬೆಲೆ ಬಾಳುವ ಇಪ್ಪತ್ತೆರಡು ಸಾಗುವಾನಿ ತುಂಡುಗಳನ್ನು ಕೊರೆದು ಸೈಜಗಳನ್ನು ಮಾಡಿ ಮನೆಯ ಹತ್ತಿರ ಇಡಲಾಗಿತ್ತು ಖಚಿತವಾಗಿ ಮಾಹಿತಿಯನ್ನು ಪಡೆದ ಶಿರಸಿಯ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ಮಾಡಿ ಸಾಗುವಾನಿ ತುಂಡುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ದಾಳಿಯಲ್ಲಿ ಸಿಕ್ಕಿದ್ದ ತುಂಡುಗಳು ಎಲ್ಲಿಂದ ಬಂದಿವೆ ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ಯಿಂದ ತಿಳಿಯಬೇಕಿದ್ದು ಈ ಬಗ್ಗೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಬ್ದುಲ್ ಅಜೀಜ್ ಅಹ್ಮದ್‌ ಶೇಖ್ ಅವರ ಮಾರ್ಗ ದರ್ಶನದ ಮೆರೆಗೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಎಸ್ ಎಮ್ ವಾಲಿ ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಅಜಯ್ ಹೆಚ್ ನಾಯ್ಕ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಇಲಿಯಾಸ್ ಆಯ್ ಶೇಖ ,ಉಪವಲಯ ಅರಣ್ಯಾಧಿಕಾರಿ, ರಾಜು ಬಿ ಪೂಜಾರ, ಜಯವಂತ ಭೋವಿ ಸಂಚಾರಿ ಗಸ್ತು ವನಪಾಲಕ ಹಾಗೂ ವಾಹನಗಳ ಚಾಲಕ ನಂದೀಶ ಗಾಡೀಗೇರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!