ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೋಸ್ ಬಟ್ಲರ್ ಅಬ್ಬರದ ಬ್ಯಾಟಿಂಗ್ ನರೆವಿನಿಂದ ಗುಜರಾತ್ ಟೈಟಾನ್ಸ್ , ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಅಗ್ರಸ್ಥಾನಕ್ಕೆ ಮರಳಿದೆ.
ಡೆಲ್ಲಿ ನೀಡಿದ್ದ 204 ರನ್ಗಳ ಗುರಿಯನ್ನ ಬೆನ್ನಟ್ಟಿದ ಗುಜರಾತ್ 7 ವಿಕೆಟ್ಗಳ ಸುಲಭ ಜಯ ಸಾಧಿಸಿದೆ. ಟೈಟನ್ಸ್ 19.2 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಇನ್ನು 4 ಎಸೆತಗಳಿರುವಂತೆ ಜಯ ಸಾಧಿಸಿತು.
ನಾಯಕ ಶುಭ್ಮನ್ ಗಿಲ್ (7) ರನ್ ಕದಿಯುವ ಆತುರದಲ್ಲಿ ಕರುಣ್ ನಾಯರ್ ಮಾಡಿದ ರನ್ಔಟ್ಗೆ ಬಲಿಯಾದರು. ಸಾಯಿ ಸುದರ್ಶನ್ 2ನೇ ವಿಕೆಟ್ಗೆ ಬಟ್ಲರ್ ಜೊತೆ 35 ಎಸೆತಗಳಲ್ಲಿ 60 ರನ್ ಜೊತೆಯಾಟ ನಡೆಸಿದರು. ಸುದರ್ಶನ್ 21 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 36 ರನ್ಗಳಿಸಿ ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಔಟ್ ಆದರು.
ಬಳಿಕ 3ನೇ ವಿಕೆಟ್ಗೆ ಬಟ್ಲರ್ ಜೊತೆಗೂಡಿದ ಶೆರ್ಫಾನ್ ರುದರ್ಫೋರ್ಡ್ 119ರನ್ಗಳ ಜೊತೆಯಾಟ ನಡೆಸಿದರು. 19ನೇ ಓವರ್ನಲ್ಲಿ ರುದರ್ಫೋರ್ಡ್ ಔಟ್ ಆಗುವ ಮುನ್ನ 34 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ಗಳ ಸಹಿತ 42 ರನ್ಗಳಿಸಿದರು. ಕೊನೆಯ ಓವರ್ನಲ್ಲಿ ಗೆಲ್ಲಲು 10 ರನ್ಗಳ ಅವಶ್ಯಕತೆಯಿತ್ತು. ತೆವಾಟಿಯಾ ಮೊದಲ 2 ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಬಟ್ಲರ್ 54 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ ಅಜೇಯ 97 ರನ್ಗಳಿಸಿದರು.