August 31, 2026
Monday, August 31, 2026
spot_img

ಯಾದಗಿರಿಯಲ್ಲಿ ಹಾಡಹಗಲೇ ಪತ್ರಕರ್ತನ ಕಿಡ್ನಾಪ್‌: ಬೈಕ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಅಪಹರಣ

ಹೊಸದಿಗಂತ ವರದಿ ಯಾದಗಿರಿ:

ನಗರದಲ್ಲಿ ಹಾಡು ಹಗಲೇ ಪತ್ರಕರ್ತರೊಬ್ಬರನ್ನು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿದ ಘಟನೆ ಶನಿವಾರ ನಡೆದಿದೆ.

ಸಾಗರ ದೇಸಾಯಿ ಅಪಹರಣಕ್ಕೆ ಒಳಗಾದ ಪತ್ರಕರ್ತ. ನಗರದ ಲುಂಬಿನಿ ಉದ್ಯಾನವನದ ಬಳಿ ಸಾಗರ ಬೈಕ್ ಮೇಲೆ ತೆರಳುವಾಗ ಕಾರಿನಲ್ಲಿ ಅಡ್ಡಗಟ್ಡಿದ ದುಷ್ಕರ್ಮಿಗಳು ಬೈಕ್ ನಿಲ್ಲಿಸಿದ್ದಾರೆ.

ನಂತರ ಕಾರಿನಲ್ಲಿ ಕೂರಿಸಿಕೊಂಡು ತೆರಳಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು ಸಿಸಿ ಕ್ಯಾಮರಗಳನ್ನು ಪರಿಶೀಲಿಸುತ್ತಿದ್ದಾರೆ.

ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !