ಬರವಣಿಗೆ ಸ್ವಾತಂತ್ರ್ಯ ಜೊತೆಗೆ ಹೆಚ್ಚು ಸಂಪಾದಿಸಲು ಬಯಸುವ ಪತ್ರಕರ್ತರಿಗೆ ಆಹ್ವಾನ ನೀಡಿದ ಎಲಾನ್‌ ಮಸ್ಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸದಾ ಒಮ್ಮಿಂದೊಮ್ಮೆಲೆ ವಿಭಿನ್ನ ಪ್ರಯತ್ನಗಳ ಮೂಲಕ ಸುದ್ದಿಯಾಗುತ್ತಿರುವ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌, ಇದೀಗ ಪತ್ರಕರ್ತರಿಗೆ ವಿಶೇಷ ಆಹ್ವಾನವೊಂದನ್ನು ನೀಡಿದ್ದಾರೆ.

ಬರವಣಿಗೆ ಸ್ವಾತಂತ್ರ್ಯವನ್ನು ಬಯಸುವುದರ ಜೊತೆಗೆ ಹೆಚ್ಚು ಸಂಪಾದನೆ ಮಾಡಲು ಬಯಸುವ ಪತ್ರಿಕೋದ್ಯಮಿಗಳಿಗೆ ಎಲಾನ್ ಮಸ್ಕ್ ಆಫರ್ ನೀಡಿದ್ದಾರೆ.

ಈ ಕುರಿತು ಎಕ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು,”ನೀವು ನಿಮ್ಮ ಬರವಣಿಗೆಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಹೆಚ್ಚಿನ ಆದಾಯವನ್ನು ಬಯಸುವ ಪತ್ರಕರ್ತರಾಗಿದ್ದರೆ, ಈ ವೇದಿಕೆಯಲ್ಲಿ ನೇರವಾಗಿ ನಿಮ್ಮ ವರದಿಯನ್ನು ಪ್ರಕಟಿಸಿ” ಎಂದು ಮಸ್ಕ್‌ ಹೇಳಿದ್ದಾರೆ.

ಈ ಹಿಂದೆ ಟ್ವಿಟ್ಟರ್ ಎಂದು ಕರೆಯಲಾಗುತ್ತಿದ್ದ, ಎಕ್ಸ್‌ನಲ್ಲಿ ಪತ್ರಕರ್ತರು ತಮ್ಮ ವರದಿಗಳನ್ನು ನೇರವಾಗಿ ಪ್ರಕಟಿಸಿಸಬಹುದು. ಆಗ ಹೂಡಿಕೆದಾರರು ನಿಮಗೆ ಹೆಚ್ಚಿನ ಆದಾಯವನ್ನು ಮತ್ತು ಅಧಿಕ ಸ್ವಾತಂತ್ರ್ಯವನ್ನು ನೀಡುತ್ತಾರೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!