ಹೊಸದಿಗಂತ ಡಿಜಿಟಲ್ ಡೆಸ್ಕ್:
ಧನ್‌ಬಾದ್‌ನ ಬರ್ವಡ್ಡಾ ವಿಮಾನ ನಿಲ್ದಾಣದಿಂದ ಹಾರಿದ ಜಾಯ್ ಗ್ಲೈಡರ್‌ವೊಂದು ಕೆಲವೇ ನಿಮಿಷದಲ್ಲಿ ಪತನವಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗ್ಲೈಡರ್ ಟೇಕಾಫ್ ಆದ ಕೆಲವೇ ನಿಮಿಷದಲ್ಲಿ ತಾಂತ್ರಿಕ ದೋಷದಿಂದ ಬಿರ್ಸಾ ಮುಂಡಾ ಪಾರಕ್ ಬಳಿ ಕಟ್ಟಡಕ್ಕೆ ಡಿಕ್ಕಿ ಹೊಡೆದು ನಜ್ಜುಗುಜ್ಜಾಗಿದೆ.
ನೀಲೇಶ್ ಕುಮಾರ್ ಎನ್ನುವವರ ಮನೆ ಮೇಲೆ ಡ್ಲೈಡರ್ ಬಿದ್ದಿದ್ದು, ತಕ್ಷಣವೇ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಾಯ್ ಗ್ಲೈಡರ್‌ನಲ್ಲಿ ಕೇವಲ ಇಬ್ಬರು ವ್ಯಕ್ತಿಗಳಿಗೆ ಮಾತ್ರ ಕೂರಲು ಅವಕಾಶ ಇರುತ್ತದೆ. 14 ವರ್ಷದ ಬಾಲಕ ಕುಶ್ ಸಿಂಗ್ ಹಾಗೂ ಪೈಲಟ್ ಜಾಯ್ ಗ್ಲೈಡರ್‌ನಲ್ಲಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಏನೆಲ್ಲಾ ನಡೆದಿದೆ ಎನ್ನುವ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ವಿಮಾನ ನಿಲ್ದಾಣ ಪ್ರಾಧಿಕಾರ ತನಿಖೆ ನಡೆಸಲಿದೆ.
A glider crashed in Dhanbad, Jharkhand… 2 seater glider took off from Dhanbad airport… Two people, including pilot injured…. #glidercrash #dhanbad pic.twitter.com/8MJFMDRVAx
— Prashant Singh (TV9 Bharatvarsh) (@prashant_rohan) March 23, 2023