ಮಹಿಳಾ ವಿಭಾಗದಲ್ಲಿ ತೃತೀಯ ಲಿಂಗಿ ಅಥ್ಲೀಟ್ಸ್‌ಗಳಿಗೆ ಅವಕಾಶ ಇಲ್ಲ: ಸೆಬಾಸ್ಟಿಯನ್ ಕೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ವಿಭಾಗದಲ್ಲಿ ತೃತೀಯ ಲಿಂಗಿ ಅಥ್ಲೀಟ್ಸ್‌ಗಳಿಗೆ ಅವಕಾಶ ಇಲ್ಲ ಎಂದು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಹೇಳಿದ್ದಾರೆ.
ಟೆಸ್ಟಾಸ್ಟೊರೋನ್ ಮಟ್ಟವನ್ನು ಪರಿಶೀಲನೆ ಮಾಡದೆಯೇ ತೃತೀಯ ಲಿಂಗಿ ಮಹಿಳೆಯರಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದಿಲ್ಲ ಎಂದಿದ್ದಾರೆ.

ಮಹಿಳೆಯರಿಗಾಗಿ ಇರುವ ಟ್ರ್ಯಾಕ್ ಹಾಗೂ ಫೀಲ್ಡ್‌ನಲ್ಲಿ ಟೆಸ್ಟೊಸ್ಟೊರೋನ್ ಮಟ್ಟದ ಪರೀಕ್ಷೆಯಾಗದ ತೃತೀಯ ಲಿಂಗಿ ಅಥ್ಲೀಟ್ಸ್‌ಗಳನ್ನು ಬಿಡಲಾಗುವುದಿಲ್ಲ. ಮಾರ್ಚ್ 31 ರಿಂದ ವಿಶ್ವ ಮಹಿಳಾ ಶ್ರೇಯಾಂಕದ ಸ್ಪರ್ಧೆಗಳು ನಡೆಯಲಿವೆ. ಇಲ್ಲಿ ಪುರುಷ ಪ್ರೌಢಾವಸ್ಥೆಯನ್ನು ದಾಟಿದ ಯಾವುದೇ ಮಹಿಳಾ ಟ್ರಾನ್ಸ್‌ಜೆಂಡರ್ ಅಥ್ಲೀಟ್‌ಗಳನ್ನು ಸ್ಪರ್ಧೆಯಿಂದ ಹೊರಗಿಡಲು ಕೌನ್ಸಿಲ್ ತೀರ್ಮಾನಿಸಿದೆ ಎಂದಿದ್ದಾರೆ.

ಸಮಾಲೋಚನೆ ನಂತರ ತೀರ್ಮಾನಕ್ಕೆ ಬರಲಾಗಿದೆ. ನಮ್ಮ ಕ್ರೀಡೆಯ ಉತ್ತಮ ಹಿತಾಸಕ್ತಿಗಾಗಿ ನಿರ್ಧಾರ ಕೈಗೊಂಡಿದ್ದೇವೆ. ನಿರ್ಧಾರಗಳು ಶಾಶ್ವತವಲ್ಲ, ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ಮತ್ತಷ್ಟು ಮಾಹಿತಿ ಬೇಕಿದೆ. ಇದಕ್ಕಾಗಿ ಟ್ರಾನ್ಸ್‌ಜೆಂಡರ್ ನೇತೃತ್ವದಲ್ಲಿ ವರ್ಕಿಂಗ್ ಗ್ರೂಪ್ ರಚನೆಯಾಗಲಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!