ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಟ್ವಿಟರ್ ಖಾತೆ ಹ್ಯಾಕ್: ರಷ್ಯಾ-ಉಕ್ರೇನ್ ಗಾಗಿ ದೇಣಿಗೆ ಕೇಳಿದ ಹ್ಯಾಕರ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ.
ಹ್ಯಾಕರ್ಸ್ ಗಳು ನಡ್ಡಾ ಅವರ ಟ್ವಿಟರ್ ಖಾತೆಯಿಂದ ಉಕ್ರೇನ್ ಮತ್ತು ರಷ್ಯಾದ ಬೆಂಬಲ ಯಾಚಿಸಿ, ಕ್ರಿಪ್ಟೊ ಕರೆನ್ಸಿ ಮೂಲಕ ದೇಣಿಗೆ ನೀಡುವಂತೆ ಪೋಸ್ಟ್ ಮಾಡಿದೆ. ಕೆಲವೇ ಕ್ಷಣಗಳಲ್ಲಿ ಉಕ್ರೇನ್ ಹಾಗೂ ರಷ್ಯಾದ ಹೆಸರುಗಳನ್ನು ಬಳಸಿ ಟ್ವೀಟ್ ಮಾಡಿ ಡಿಲೀಟ್ ಮಾಡಲಾಗಿದೆ.
ಅಷ್ಟೇ ಅಲ್ಲದೆ ಹ್ಯಾಕರ್ ಗಳು ಖಾತೆ ಹ್ಯಾಕ್ ಆಗಿದೆ ಎಂದು ಹೇಳಿ ಮತ್ತೆ ರಷ್ಯಾಗೆ ನೆರವು ಅಗತ್ಯವಿದೆ ನಾವು ರಷ್ಯಾ ಪರವಾಗಿ ದೇಣಿಗೆ ಸ್ವೀಕರಿಸುತ್ತೇವೆ ಎಂದು ಪೋಸ್ಟ್ ಮಾಡಿದ್ದಾರೆ.
ಸದ್ಯ ಹ್ಯಾಕರ್ ಗಳು ಪೋಸ್ಟ್ ಮಾಡಿದ್ದ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!