ಉಕ್ರೇನ್ ವೈದ್ಯ ಶಿಕ್ಷಣ ಭಾರತೀಯರನ್ನೇಕೆ ಆಕರ್ಷಿಸುತ್ತಿದೆ? ಇಲ್ಲಿವೆ 5 ಕಾರಣಗಳು

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಯುದ್ಧಗ್ರಸ್ತ ಉಕ್ರೇನಿನಿಂದ ವಾಪಸು ಬರುತ್ತಿರುವವರಲ್ಲಿ ಹೆಚ್ಚಿನವರೆಲ್ಲ ವೈದ್ಯಕೀಯ ವಿದ್ಯಾರ್ಥಿಗಳು. ಬಹುಶಃ ನಮ್ಮಲ್ಲಿ ಹೆಚ್ಚಿನವರಿಗೆ ಭಾರತೀಯರು ಇಷ್ಟೊಂದು ಪ್ರಮಾಣದಲ್ಲಿ ಉಕ್ರೇನಿನಲ್ಲಿ ವೈದ್ಯ ಕೋರ್ಸ್ ಕಲಿಯುತ್ತಿದ್ದಾರೆ ಅಂತ ಗೊತ್ತಾಗಿದ್ದೇ ಈ ಸಂಘರ್ಷದ ಸಂದರ್ಭದಲ್ಲಿ. ಹಾಗಾದರೆ, ಉಕ್ರೇನ್ ಭಾರತೀಯರ ಪಾಲಿಗೆ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಪ್ರಶಸ್ತ ಸ್ಥಳವಾಗಿರುವುದಾದರೂ ಹೇಗೆ? ಇಲ್ಲಿವೆ ನೀವು ತಿಳಿದಿರಬೇಕಾದ ಅಂಶಗಳು.
1. ಭಾರತದಲ್ಲಿ ಸರ್ಕಾರಿ ವೈದ್ಯ ಸೀಟು ಸಿಗದಿದ್ದವರಿಗೆ ಇಲ್ಲಿನ ಖಾಸಗಿ ಕಾಲೇಜುಗಳಿಗೆ ದುಬಾರಿ ಮೊತ್ತ ತೆರುವುದಕ್ಕಿಂತ ಉತ್ತಮ ಆಯ್ಕೆ ಉಕ್ರೇನ್. ವರದಿಗಳ ಪ್ರಕಾರ ವಾರ್ಷಿಕ ರುಪಾಯಿ 4 ಲಕ್ಷದ ಖರ್ಚಲ್ಲಿ ವೈದ್ಯ ಪದವಿ ಓದಬಹುದು. ಹಾಗೆಂದೇ ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಹೊರದೇಶದವರ ಪೈಕಿ ಭಾರತದ ಪಾಲು ಶೇ. 22.
2. ಇಲ್ಲಿನ ವಿಶ್ವವಿದ್ಯಾಲಯಗಳ ಗುಣಮಟ್ಟದ ಬಗ್ಗೆಯೂ ಒಳ್ಳೆಯ ಮಾತುಗಳಿವೆ. ಇಲ್ಲಿನ ವೈದ್ಯ ವಿಶ್ವವಿದ್ಯಾಲಯಗಳು ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣೀಕರಣ ಗಳಿಸಿರುವುದರಿಂದ ಜಾಗತಿಕ ಅವಕಾಶಗಳು ಸುಲಭ.
3. ಇಲ್ಲಿ ಓದಿದವರು ಯುರೋಪಿನಲ್ಲಿ ವೃತ್ತಿ ಅವಕಾಶಗಳನ್ನು ಪಡೆಯುವುದಕ್ಕೂ ಹೆಚ್ಚು ಅನುಕೂಲವಾಗುತ್ತದೆ. ಏಕೆಂದರೆ ಉಕ್ರೇನ್ ವೈದ್ಯ ವಿದ್ಯಾಲಯಗಳ ಕೋರ್ಸುಗಳಿಗೆ ಯುರೋಪ್ ಮತ್ತು ಇಂಗ್ಲೆಂಡಿನ ಮೆಡಿಕಲ್ ಕೌನ್ಸಿಲ್ ಗಳು ಮಾನ್ಯತೆ ನೀಡಿವೆ.
4. ಹೆಚ್ಚಿನ ವಿದ್ಯಾಲಯಗಳಲ್ಲಿ ಪ್ರವೇಶ ಪರೀಕ್ಷೆ ಇಲ್ಲ
5. ಯುರೋಪ್ ಎಂದಕೂಡಲೇ ಸಾಮಾನ್ಯವಾಗಿ ಇಂಗ್ಲೀಷೇತರ ಮಾಧ್ಯಮದಲ್ಲಿ ಕಲಿಕೆ ಇರುತ್ತದೆ. ಆದರೆ ಉಕ್ರೇನ್ ವೈದ್ಯ ವಿದ್ಯಾಲಯಗಳ ಕಲಿಕೆಯ ಮಾಧ್ಯಮ ಇಂಗ್ಲಿಷ್ ಆಗಿರುವುದು ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!