ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮೇ 28, ತೆಲುಗಿನ ಮಹಾನ್ ನಾಯಕ, ಲಕ್ಷಾಂತರ ಅಭಿಮಾನಿಗಳ ಆರಾಧ್ಯ ದೈವ ದಿವಂಗತ ನಂದಮೂರಿ ತಾರಕ ರಾಮರಾವ್ ಅವರ ಜನ್ಮದಿನ. ಈ ದಿನ ಅವರ ಶತಮಾನೋತ್ಸವ ಕೂಡ ಆಗಿರುವುದರಿಂದ ಎನ್‌ಟಿಆರ್ ಕುಟುಂಬ ಸದಸ್ಯರು, ಅಭಿಮಾನಿಗಳು ಮತ್ತು ತೆಲುಗು ದೇಶಂ ಪಕ್ಷ ಎನ್‌ಟಿಆರ್ ಶತಮಾನೋತ್ಸವ ಆಚರಣೆಯನ್ನು ಆಯೋಜಿಸುತ್ತಿದೆ. ಇದರ ಅಂಗವಾಗಿ ನಿನ್ನೆ ರಾತ್ರಿಯೇ ಹೈದರಾಬಾದ್‌ನಲ್ಲಿರುವ ನೆಕ್ಲೇಸ್ ರಸ್ತೆಯಲ್ಲಿರುವ ಎನ್‌ಟಿಆರ್ ಘಾಟ್ ಸುಂದರವಾಗಿ ಮದುವಣಗಿತ್ತಿಯಂತೆ ಅಲಂಕಾರಗೊಂಡಿದೆ.
ಇಂದು ಬೆಳಗ್ಗೆ ತಮ್ಮ ತಾತನ ಜನ್ಮದಿನದ ಅಂಗವಾಗಿ ಜ್ಯೂ.ಎನ್‌ಟಿಆರ್, ಕಲ್ಯಾಣ್ ರಾಮ್ ಎನ್‌ಟಿಆರ್ ಘಾಟ್‌ಗೆ ಆಗಮಿಸಿ, ಪುಷ್ಪನಮನ ಸಲ್ಲಿಸಿದರು. ಬೆಳಗ್ಗೆಯಿಂದಲೇ ನೆಚ್ಚಿನ ನಟನಿಗೆ ಗೌರವ ಸಲ್ಲಿಸಲು ತಂಡೋಪತಂಡವಾಗಿ ಜನಸಾಗರ ಹರಿದುಬರುತ್ತಿದೆ. ಫಿಲ್ಮ್ ನಗರ್ ಸೊಸೈಟಿಯ ಆಶ್ರಯದಲ್ಲಿ, ಫಿಲ್ಮ್ ನಗರದಲ್ಲಿ ಎನ್‌ಟಿಆರ್ ಪ್ರತಿಮೆ ಅನಾವರಣಗೊಳ್ಳಲಿದೆ. ಈ ಸಮಾರಂಭದಲ್ಲಿ ಅನೇಕ ಸಿನಿ ತಾರೆಯರು ಹಾಗೂ ಇಡೀ ಎನ್‌ಟಿಆರ್ ಕುಟುಂಬದವರು ಭಾಗವಹಿಸಲಿದ್ದಾರೆ.