ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್‌ಆರ್‌ಆರ್ ಬಳಿಕ ಜ್ಯೂ.ಎನ್‌ಟಿಆರ್ ಮುಂಬರುವ ಚಿತ್ರ ‘ದೇವರ’. ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿದ್ದು, ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿ, ಸೈಫ್ ಅಲಿ ಖಾನ್ ಮತ್ತು ಮಲಯಾಳಂ ನಟ ಶೈನ್ ಟಾಮ್ ಚಾಕೊ ಖಳನಾಯಕರಾಗಿ ನಟಿಸಿದ್ದಾರೆ.
ಸದ್ಯ ಈ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಈ ಸಿನಿಮಾ ಫುಲ್ ಮಾಸ್ ಆ್ಯಕ್ಷನ್ ಆಗಲಿದೆ ಎಂದು ಕೊರಟಾಲ ಈ ಸಿನಿಮಾದ ನಿರೀಕ್ಷೆಯನ್ನು ಈಗಾಗಲೇ ಹೆಚ್ಚಿಸಿದ್ದಾರೆ. ಸಾಕಷ್ಟು ಮಾಸ್ ದೃಶ್ಯಗಳಿದ್ದು, ಈಗಾಗಲೇ ಮೂರು ಶೆಡ್ಯೂಲ್‌ಗಳನ್ನು ಚಿತ್ರೀಕರಿಸಲಾಗಿದೆ. ಇತ್ತೀಚೆಗಷ್ಟೇ ಈ ಸಿನಿಮಾದಿಂದ ಇಂಟ್ರೆಸ್ಟಿಂಗ್ ಮಾತು ಕೇಳಿಬರುತ್ತಿದೆ.
ದೇವರ ಚಿತ್ರದಲ್ಲಿ ಎನ್ ಟಿಆರ್ ಸಮುದ್ರದಲ್ಲಿ ಶಾರ್ಕ್ ಜೊತೆ ಮಾಸ್ ಫೈಟ್ ಮಾಡಲಿದ್ದಾರಂತೆ. ಛತ್ರಪತಿ ಸಿನಿಮಾದಲ್ಲಿ ಪ್ರಭಾಸ್ ತಿಮಿಂಗಿಲದೊಂದಿಗೆ ಕಾದಾಡಿದಂತೆ, ಎನ್ ಟಿಆರ್ ಕೂಡ ಸಮುದ್ರದಲ್ಲಿ ಫೈಟ್ ಮಾಡಲಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿಯೇ ಎನ್ ಟಿಆರ್ ಅಕ್ವಾಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆಯೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಆದರೆ ಆ ಫೈಟ್ ಸೀಕ್ವೆನ್ಸ್ ನಲ್ಲಿ ಹೆಚ್ಚಿನ ಗ್ರಾಫಿಕ್ಸ್ ಇರಲಿದೆ ಹಾಗಾಗಿ ಗ್ರಾಫಿಕ್ಸ್ ಬಗ್ಗೆ ಎನ್ ಟಿಆರ್ ವಿಶೇಷ ಗಮನ ಹರಿಸಬೇಕು ಎಂದು ಚಿತ್ರತಂಡಕ್ಕೆ ವಿಮರ್ಶಕರು ಸೂಚನೆ ಕೊಟ್ಟಿದ್ದಾರಂತೆ. ಇದು ಎಷ್ಟರಮಟ್ಟಿಗೆ ನಿಜ ಎಂಬುದು ಗೊತ್ತಿಲ್ಲ. ಈ ಬಗ್ಗೆ ಒಂದು ಪೋಸ್ಟರ್ ಕೂಡ ವೈರಲ್ ಆಗಿದೆ.