Friday, August 19, 2022

Latest Posts

ಪತ್ನಿಗೆ ʻಬೃಂದಾವನʼವನ್ನು ಉಡುಗೊರೆ ನೀಡಿದ ಜ್ಯೂ.ಎನ್‌ಟಿಆರ್: ಬೆಲೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಾಲಿವುಡ್ ಸ್ಟಾರ್ ಹೀರೋ ಯಂಗ್ ಟೈಗರ್ ಎನ್‌ಟಿಆರ್ ಯಶಸ್ಸಿನ ಬೆನ್ನು ಹತ್ತಿದ್ದಾರೆ. ಹೊಸ ಸಿನಿಮಾಗಳ ಮೂಲಕ ಸರಣಿ ಹಿಟ್‌ ಸಾಧಿಸಿ ಹೆಸರು ಮಾಡುತ್ತಿದ್ದಾರೆ. RRR ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚಿದ ಎನ್‌ಟಿಆರ್ ತಮ್ಮ ಪತ್ನಿ ಪ್ರಣತಿಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಫಾರ್ಮ್ ಹೌಸ್ ನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ತಾರಕ್ ಕಳೆದ ವರ್ಷ ಫಾರ್ಮ್ ಹೌಸ್ ಗಾಗಿ ಹೈದರಾಬಾದ್ ನಗರದ ಹೊರವಲಯದಲ್ಲಿ ಜಮೀನು ಖರೀದಿಸಿದ್ದರು. ಅಂದಿನಿಂದ ಅದರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇತ್ತೀಚೆಗೆಷ್ಟೇ ಆ ಫಾರ್ಮ್ ಹೌಸ್ ಪೂರ್ಣಗೊಂಡಿದೆ.

ಎನ್‌ಟಿಆರ್ ಆ ಫಾರ್ಮ್ ಹೌಸ್ ಗೆ ‘ಬೃಂದಾವನಂ’ ಎಂದು ಹೆಸರಿಟ್ಟಿದ್ದು, ಇದನ್ನು ಅವರ ಪತ್ನಿ ಲಕ್ಷ್ಮಿ ಪ್ರಣತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅವರ ತಾತ ಎನ್ ಟಿಆರ್ ರಾಮ ಮತ್ತು ಕೃಷ್ಣನಾಗಿ ತೆಲುಗು ಜನರ ಹೃದಯದಲ್ಲಿ ಭದ್ರವಾದ ಸ್ಥಾನವನ್ನು ಗಳಿಸಿದ್ದಾರೆ. ಅಲ್ಲದೆ, ಅವರ ಎಲ್ಲಾ ಪುತ್ರರಿಗೂ ಕೃಷ್ಣ ಎಂದೇ ಹೆಸರಿಟ್ಟಿದ್ದಾರೆ. ಕೃಷ್ಣ ಬೆಳೆದ ಬೃಂದಾವನದ ಹೆಸರನ್ನು ತಾರಕ್ ಅವರ ಫಾರ್ಮ್‌ಹೌಸ್‌ಗೆ ಹೆಸರಿಸಿದ್ದಾರೆ ಎಂದು ಆಪ್ತರು ಹೇಳುತ್ತಾರೆ.

ಅನೇಕ ಸ್ಟಾರ್ ಹೀರೋಗಳು ಈಗಾಗಲೇ ತಮ್ಮದೇ ಆದ ಫಾರ್ಮ್ ಹೌಸ್ ಹೊಂದಿದ್ದಾರೆ. ಇದೀಗ ಈ ಪಟ್ಟಿಗೆ ಎನ್‌ಟಿಆರ್ ಕೂಡ ಸೇರಿಕೊಂಡಿದ್ದಾರೆ. 6.5 ಎಕರೆಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅತ್ಯಂತ ಸುಂದರವಾಗಿ ಈ ಫಾರ್ಮ್ ಹೌಸ್ ನಿರ್ಮಿಸಲಾಗಿದೆ. ಈ ಫಾರ್ಮ್ ಹೌಸ್ ಫೋಟೋಗಳು ಯಾವಾಗ ಹೊರಬರುತ್ತವೆ ಎಂದು ಎನ್ ಟಿಆರ್ ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!